ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ದೇವಲಾಪುರದಲ್ಲಿ ಚಿರತೆ ದಾಳಿ: ಇಬ್ಬರಿಗೆ ಗಾಯ

Vishwanath S
Updated On : 5 Aug 2013, 12:21 pm

ಕನಕಗಿರಿ: ಗಂಗಾವತಿ ತಾಲೂಕಿನ ಕನಕಗಿರಿ ಸಮೀಪದ ದೇವಲಾಪುರ ಗ್ರಾಮದಲ್ಲಿ ಇಬ್ಬರ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ. ಸರ್ವೇ ನಂ. 41ರಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ದುರುಗಪ್ಪ ಭೋವಿ, ನಾಗೇಶ ಕುರುಬರ ಜಮೀನಿನಲ್ಲಿ ನೀರು ಹರಿಸುತ್ತಿರುವಾಗ ಚಿರತೆ ಇಬ್ಬರ ಮೇಲೆ ಏಕಾಏಕಿ ದಾಳಿ ಮಾಡಿದೆ. ಭಯಪಟ್ಟು ಜೋರಾಗಿ ಕೂಗುತ್ತಿದ್ದಂತೆ ರೈತರು ಓಡಿ ಬರುವಷ್ಟರಲ್ಲಿಯೇ ಬೇಟೆಯಾಡಲು ಬಂದ ಚಿರತೆ ಹೆದರಿ ಓಡಿ ಹೋಯಿತು. ಗಾಯಾಳುಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ದುರುಗಪ್ಪ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆ ಪಡೆಯಲು ತಾಲೂಕು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ. ತಾಲೂಕು ಅರಣ್ಯಾಧಿಕಾರಿ ಹನುಮಂತಯ್ಯ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ,  ಸುದ್ದಿಗಾರರೊಂದಿಗೆ ಮಾತನಾಡಿದರು. ಗಂಗಣ್ಣ ಸಮಗಂಡಿ, ವೀರೇಶ ಸಾಲೋಣಿ, ಬಸಲಿಂಗಯ್ಯಸ್ವಾಮಿ, ಕೆ. ಗಂಗಾಧರಸ್ವಾಮಿ, ಪ್ರಶಾಂತ ಪ್ರಭುಶೆಟ್ಟರ್, ಕೆ.ಎಚ್. ಕುಲಕರ್ಣಿ, ಪ್ರಭು ಉಪ್ಪನಾಳ, ಮಂಜುನಾಥ ಗಡಾದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement