ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ದೊಡ್ಡಾಟ ಸಾಂಸ್ಕೃತಿಕ ಪರಂಪರೆ ಪ್ರತೀಕ

Vishwanath S
Updated On : 5 Aug 2013, 12:09 pm

ಕುಂದಗೋಳ: ನಾಟಕಗಳು ನಮ್ಮ ಐತಿಹಾಸಿಕ ಪರಂಪರೆಯನ್ನು ಸಾರುವ ಪ್ರಮುಖ ಕಲೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ದೃಶ್ಯಮಾಂದ್ಯಮಕ್ಕೆ ಜನತೆ ಮಾರುಹೋಗಿ ನಮ್ಮ ಪರಂಪರೆ, ಸಂಸ್ಕೃತಿ ಮರೆಯಗುತ್ತಿದ್ದು, ಈ ಸಂದರ್ಭದಲ್ಲಿ ಜಾನಪದ ಒಳಗೊಂಡ ಮೂಡಲಪಾಯ ದೊಡ್ಡಾಟ ಪ್ರದರ್ಶನಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಶಾಸಕ ಸಿ.ಎಸ್. ಶಿವಳ್ಳಿ ಹೇಳಿದರು.
ಭಾನುವಾರ ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ತಾಲೂಕು ಕಲಾವಿದರ ಸಂಘ, ಶರಣ ಸಾಹಿತ್ಯ-ಕನ್ನಡ ಸಾಹಿತ್ಯ-ಕರ್ನಾಟಕ ಜಾನಪದ ಪರಿಷತ್, ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಗ್ರಾಮರಂಗ (ರಿ) ಇಂಗಳಗಿ ಇವರಿಂದ ನವ್ಯ ಮೂಡಲಪಾಯ ದೊಡ್ಡಾಟವಾದ ವೀರರಾಣಿ ಕಿತ್ತೂರು ಚನ್ನಮ್ಮ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಕುಂದಗೋಳ ತಾಲೂಕು ಕಲೆ-ಸಾಹಿತ್ಯ-ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದು, ಸವಾಯಿ ಗಂಧರ್ವರ ಸ್ಮಾರಕ ಭವನವನ್ನು ಈಗಾಗಲೇ ನನ್ನ ಅವಧಿಯಲ್ಲಿ ನಿರ್ಮಿಸಿದ್ದೇನೆ. ಇಂದಿನ ಶಾಸಕ ಶಿವಳ್ಳಿ ಅವರು ಗುಡಗೇರಿ ರಂಗಭೂಮಿ ಕಲಾವಿದ ದಿ೤ ಎನ್. ಬಸವರಾಜ ಅವರ ಸ್ಮಾರಕ ಭವನವನ್ನು ತಾಲೂಕಿನಲ್ಲಿ ನಿರ್ಮಿಸಿ ರಂಗಕಲೆಗೆ ಅಲ್ಲದೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.
ವೇದಿಕೆಯಲ್ಲಿ ಜಾನಪದ ಕಲಾವಿದರಾದ ಪರಮೇಶಪ್ಪ ನಾಯ್ಕರ, ಫಕ್ಕೀರಪ್ಪ ಭಜಂತ್ರಿ, ಅಡಿವೆಯ್ಯಸ್ವಾಮಿ ಹಿರೇಮಠ, ದ್ಯಾಮಣ್ಣ ಬಡಿಗೇರ, ಮಹಾದೇವಪ್ಪ ಮುಳ್ಳುರ, ಸುರೇಶ ಅರ್ಕಸಾಲಿ, ಮಲ್ಲೇಶಪ್ಪ ತಡಸದ ಇವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವರಾಜ ಬೆಂಗೇರಿ, ಅಂಬಮ್ಮ ಪಾಟೀಲ, ಚಂದ್ರಶೇಖರ ಪಾಟೀಲ, ಅರವಿಂದ ಕಟಗಿ, ರುದ್ರಪ್ಪ ಗಾಣಿಗೇರ, ಎನ್.ಎನ್. ಪಾಟೀಲ, ಜಿ.ಡಿ. ಘೋರ್ಪಡೆ, ಗುರುಸ್ವಾಮಿ ಬಾಳಿಹಳ್ಳಿಮಠ, ಅಪ್ಪಣ್ಣ ಹಿರೇಗೌಡ್ರ, ಅಜೀಜ ಕ್ಯಾಲ್ಕೊಂಡ, ಬಸವರಾಜ ದೊಡಮನಿ, ಮಲ್ಲಿಕಾರ್ಜುನ ಕುನ್ನೂರ ಇತರರು ಉಪಸ್ಥಿತರಿದ್ದರು.
ಸಾನ್ನಿದ್ಯ ವಹಿಸಿದ್ದ ಶಿಗ್ಗಾಂವಿಯ ವಿರಕ್ತಮಠದ ಸಂಗಬಸವ ಸ್ವಾಮೀಜಿ, ಹನಮನಹಳ್ಳಿಯ ಶಿವಾನಂದಮಠದ ಶ್ರೀ ಶಿವಬಸವಸ್ವಾಮೀಜಿ ಆಶೀರ್ವಚನ ನೀಡಿದರು. ಎಂ.ಎಚ್. ಮಾಳವಾಡ ಪ್ರಾಸ್ತಾವಿಕ ಮಾತನಾಡಿದರು. ಎಸ್.ಎಸ್. ಹಿರೇಮಠ ನಿರೂಪಿಸಿದರು. ಈಶ್ವರ ಅರಳಿ ಸ್ವಾಗತಿಸಿದರು. ವೀರೇಶ ಬಡಿಗೇರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement