ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಯುವತಿ ಕೊಲೆ

Vishwanath S
Updated On : 5 Aug 2013, 12:11 pm

ಕುಂದಗೋಳ: ತಾಲೂಕಿನ ರೊಟ್ಟಿಗವಾಡ ಗ್ರಾಮದ ನಿವಾಸಿ ಸಲ್ಮಾಬೇಗಂ ಮೌಲಾಸಾಬ ಮುಲ್ಲಾ(22) ಇವಳನ್ನು ಕುಟುಂಬದವರಾದ ಪತಿ, ಅತ್ತೆ, ಮಾವ ಇನ್ನಿತರರು ಸೇರಿ ಭಾನುವಾರ ಬೆಳಗ್ಗೆ ಚಿತ್ರಹಿಂಸೆ ನೀಡಿ ಹಗ್ಗದಿಂದ ತಮ್ಮ ಸ್ವಗೃಹದಲ್ಲಿ ನೇಣುಹಾಕಿ ಕೊಲೆಗೈದ ಘಟನೆ ಜರುಗಿದೆ. ತಾಲೂಕಿನ ರೊಟ್ಟಿಗವಾಡ ಗ್ರಾಮದ ಮೌಲಾಸಾಮ ಮ. ಮುಲ್ಲಾ ಇವರು ಅದೇ ಗ್ರಾಮದ ಸಲ್ಮಾಬೇಗಂ ಮೌಲಾಸಾಬ ಮುಲ್ಲಾ ಎಂಬುವಳನ್ನು 2 ವರ್ಷದ ಹಿಂದೆ ಮದುವೆಯಾಗಿದ್ದು, ಗಂಡನ ಮನೆಯವರು ಇವಳಿಗೆ ನಿತ್ಯವೂ ವರದಕ್ಷಿಣೆಯ ಕಿರುಕುಳ ಕೊಡುತ್ತ 2 ವರ್ಷಗಳಿಂದ ಹಣ ತರಲಾರದ ಕಾರಣ ಮನೆಯವರೆಲ್ಲ ಸೇರಿ ಯುವತಿಯನ್ನು ಭಾನುವಾರ ಕೊಲೆಗೈದಿದ್ದಾರೆ ಎಂದು ತಾಯಿ ಬೀಬಿಜಾನ ಹುಸೇನಸಾಬ ಬರದ್ವಾಡ ಅವರು ಕುಂದಗೋಳ ಪೊಲೀಸ್ ಠಾಣೆಯಲ್ಲಿ 8 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ಆಕೆಯ ಅತ್ತೆ ಫಾತಿಮಾ ಮ. ಮುಲ್ಲಾ, ಮಾವನಾದ ಮಾಬೂಬಸಾಬ ಮುಲ್ಲಾ ಅವರನ್ನು ಬಂಧಿಸಿದ್ದು, ಗಂಡ ಮೌಲಾಸಾಬ ಮ. ಮುಲ್ಲಾ ಸೇರಿದಂತೆ ದಿವಾನಸಾಬ ಮುಲ್ಲಾ, ಬಾಬಾಜಾನ ಮುಲ್ಲಾ, ಸುಲೇಮಾನ ಮುಲ್ಲಾ, ಜಕೀರಹುಸೇನ ಮುಲ್ಲಾ ಹಾಗೂ ಹಸೇನ್‌ಬಿ ತಹಸೀಲ್ದಾರ್ ಇವರನ್ನು ಬಂಧಿಸಲು ಕುಂದಗೋಳ ಪೊಲೀಸರು ಜಾಲ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಜಿ.ಜಿ. ಮರಿಬಾಶೆಟ್ಟ ಹಾಗೂ ಸಿಬ್ಬಂದಿ, ತಹಸೀಲ್ದಾರ್ ಎಚ್.ಎಂ. ಓಲೇಕಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಿಪಿಐ ಜಿ.ಜಿ. ಮರಿಬಾಶೆಟ್ಟ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments