ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಭ್ಯರ್ಥಿಗಳ ಆಸ್ತಿ ವಿವರ

Lingaraj Badiger
Updated On : 6 Aug 2013, 11:49 am

ಕನ್ನಡಪ್ರಭ ವಾರ್ತೆ, ಧಾರವಾಡ, ಆ. 5
ಸ್ಥಳೀಯ ಸಂಸ್ಥೆಗಳಿಂದ ಧಾರವಾಡ ವಿಧಾನ ಪರಿಷತ್ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಉಮೇದುವಾರಿಕೆ ಸಲ್ಲಿಸಿರುವ ಸ್ಪರ್ಧಿಗಳ ಪೈಕಿ ಕಾಂಗ್ರೆಸ್ಸಿನ ನಾಗರಾಜ ಛಬ್ಬಿ ಅತಿ ಹೆಚ್ಚು ಆಸ್ತಿ ಘೋಷಿಸಿಕೊಂಡಿದ್ದಾರೆ.
43 ವರ್ಷದ ಬಿಕಾಂ ಪದವೀಧರರಾಗಿರುವ ನಾಗರಾಜ ಛಬ್ಬಿ 1.68 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದು, ಪತ್ನಿ ಜ್ಯೋತಿಯ ಹೆಸರಿನಲ್ಲಿ 38.44 ಲಕ್ಷ ಚರಾಸ್ತಿ ಇರುವುದಾಗಿ ತಿಳಿಸಿದ್ದಾರೆ. ನಾಗರಾಜ ಛಬ್ಬಿ ಕೇವಲ ಒಂದು ಲಕ್ಷ ಸ್ಥಿರಾಸ್ತಿ ಹೊಂದಿದ್ದರೆ ಪತ್ನಿ ಜ್ಯೋತಿ ಹೆಸರಿನಲ್ಲಿ 16.40 ಕೋಟಿ ಸ್ಥಿರಾಸ್ತಿ ಇರುವುದಾಗಿ ತಿಳಿಸಿದ್ದಾರೆ. ಛಬ್ಬಿ ಅವರು ರು. 26.69 ಲಕ್ಷ ಹಾಗೂ ಜ್ಯೋತಿಯವರ ಹೆಸರಿನಲ್ಲಿ ರು. 48.24 ಲಕ್ಷ ಸಾಲದ ಹೊರೆಯನ್ನು ಅಫಿಡವಿಟ್‌ನಲ್ಲಿ ತೋರಿಸಿದ್ದಾರೆ. ನಾಗರಾಜ ಛಬ್ಬಿ ಬಳಿ ಐದು ಐಶಾರಾಮಿ ಕಾರುಗಳಿದ್ದು 70 ಲಕ್ಷದ ಬೆಂಟ್ಲೆ, ಆಡಿ, ಬಿಎಂಡಬ್ಲೂ ಕಾರುಗಳಿವೆ.
ಬಿಇ ಪದವೀಧರರಾಗಿರುವ ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಒಟ್ಟು ಆಸ್ತಿ 1.37 ಕೋಟಿ. ಪತ್ನಿ ಸ್ನೇಹಾ ಹೆಸರಿನಲ್ಲಿ 56.76 ಲಕ್ಷ ಆಸ್ತಿಯಿದೆ. ಪ್ರದೀಪ್ ಶೆಟ್ಟರ್ ಕರ್ನಾಟಕ ಬ್ಯಾಂಕಿನಲ್ಲಿ 11.28 ಲಕ್ಷ ಮತ್ತು ಹುಬ್ಬಳ್ಳಿ ಎಸ್‌ಬಿಐನಲ್ಲಿ 9.86 ಲಕ್ಷ ಹಾಗೂ ವಿವಿಧ ಉಳಿತಾಯ ಖಾತೆಗಳಲ್ಲಿ ರು. 42.75 ಲಕ್ಷ ಹೂಡಿಕೆ ಮಾಡಿದ್ದಾರೆ. ಪ್ರದೀಪ ಶೆಟ್ಟರ ಹೆಸರಲ್ಲಿ 50 ಗ್ರಾಂ ಚಿನ್ನ, ಪತ್ನಿ ಸ್ನೇಹಾ ಬಳಿ 300 ಗ್ರಾಂ ಚಿನ್ನ ಹಾಗೂ ಒಂದು ಕೆ.ಜಿ. ಬೆಳ್ಳಿಯಿದೆ. ಹುಬ್ಬಳ್ಳಿ, ಬೆಂಗಳೂರು ಸೇರಿ ವಿವಿಧೆಡೆ ಪ್ರದೀಪ ಶೆಟ್ಟರ್ ರು. 1.22 ಕೋಟಿ ಮೌಲ್ಯದ ವಸತಿ ಕಟ್ಟಡಗಳನ್ನು ಅವರು ಹೊಂದಿದ್ದು ಪತ್ನಿ ಹೆಸರಿನಲ್ಲಿ ರು. 48.52 ಲಕ್ಷ ಮೌಲ್ಯದ ವಸತಿ ಕಟ್ಟಡಗಳಿವೆ. ಪ್ರದೀಪ ಯಾವುದೇ ಋಣಭಾರ ಹೊಂದಿಲ್ಲವಾದರೂ ಪತ್ನಿ ಹೆಸರಿನಲ್ಲಿ ರು. 55 ಲಕ್ಷ ಮತ್ತು 9.81 ಲಕ್ಷದ ಸಾಲದ ಭಾರವಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಜನತಾ ಪಕ್ಷದಿಂದ ಕಣಕ್ಕಿಳಿದಿರುವ ಶಿವರಾಜ ಸಜ್ಜನರ ಬಿಎಸ್‌ಸಿ ಪದವೀಧರರಾಗಿದ್ದಾರೆ. ಸಜ್ಜನರ 73.60 ಲಕ್ಷ ಸ್ಥಿರಾಸ್ತಿ ಹೊಂದಿದ್ದರೆ ಪತ್ನಿ ಹೇಮಾ ಹೆಸರಿನಲ್ಲಿ 14.71 ಲಕ್ಷ ಸ್ಥಿರಾಸ್ತಿ ಹೊಂದಿದ್ದಾರೆ. ಸಜ್ಜನರ ಬಳಿ 20.10 ಲಕ್ಷ ಚರಾಸ್ತಿಯಿದ್ದರೆ ಪತ್ನಿ ಹೆಸರಿನಲ್ಲಿ ರು. 5.75 ಲಕ್ಷ ಚರಾಸ್ತಿಯಿದೆ. ರು. 12 ಲಕ್ಷ, ಒಂದು  ಡಸ್ಟರ್ ಕಾರಿದ್ದು, 300 ಗ್ರಾಂ ಚಿನ್ನವಿದೆ. ಪತ್ನಿ ಹೆಸರಿನಲ್ಲಿ 200 ಗ್ರಾಂ ಚಿನ್ನವಿದೆ. ಶಿವರಾಜ ಸಜ್ಜನರ ರು. 51.30 ಲಕ್ಷ ಸಾಲದ ಭಾರ ತೋರಿಸಿದ್ದರೆ ಪತ್ನಿ ಹೇಮಾ ಹೆಸರಿನಲ್ಲಿ ರು. 6.35 ಲಕ್ಷ ಸಾಲವಿದೆ ಎಂದು ನಾಮಪತ್ರ ಸಲ್ಲಿಕೆ ವೇಳೆ ತೋರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement