ಪೊಲೀಸ್ ಠಾಣೆಯಲ್ಲಿ ಜನಸಂಪರ್ಕ ಸಭೆ
ಕಲಘಟಗಿ: ಸಾರ್ವಜನಿಕರು ಪೊಲೀಸರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಸ್ಥಳೀಯ ಕುಂದು ಕೊರತೆಗಳನ್ನು ಸಹಕಾರ ಮನೋಭಾವನೆಯೊಂದಿಗೆ ಮಾಹಿತಿ ನೀಡಬೇಕೆಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶಕುಮಾರ ಮನವಿ ಮಾಡಿದರು.
ಸೋಮವಾರ ಸಂಜೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಜರುಗಿದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಪಾಲ್ಗೊಂಡ ಜನರ ಅಹವಾಲುಗಳನ್ನು ಆಲಿಸಿದರಲ್ಲದೆ ಬಹುದಿನಗಳಿಂದ ಇಲ್ಲಿನ ಠಾಣೆಯಲ್ಲಿರುವ ಸಿಬ್ಬಂದಿ ಕೊರತೆ ನೀಗಿಸುವ ಕುರಿತು ಭರವಸೆ ನೀಡಿದರು.
ಪಪಂ ಮಾಜಿ ಅಧ್ಯಕ್ಷ ಶಿವಾಜಿ ವಾಗ್ಮೋಡೆ, ಗಣ್ಯರಾದ ಬಾಬಾಸಾಬ ಕಾಶೀಂನವರ, ಸಿಪಿಐ ಅಮರೇಶ ಬಾರಕೇರ, ಬ್ರಹ್ಮಕುಮಾರ ಅಳಗವಾಡಿ, ಶಂಕರಗಿರಿ ಬಾವಾನವರ, ತಾಪಂ ಸದಸ್ಯ ಶೇಖಪ್ಪ ಹುಲಗೂರ, ಪಪಂ ಸದಸ್ಯರಾದ ನಾಗರಾಜ ಉಡುಪಿ, ದೈವಜ್ಞ, ಮಹ್ಮದಖಾನ ಜಹಗೀರದಾರ, ಅಬ್ದುಲ್ ಕರೀಂ, ಅಬ್ದುಲ್ ಸತ್ತಾರ ಮಿಶ್ರಿಕೋಟಿ, ವೃಷಭೇಂದ್ರ ಪಟ್ಟಣಶೆಟ್ಟಿ, ಶಂಕರಗಿರಿ ಬಾವಾನವರ, ಸದಾನಂದ ಚಿಂತಾಮಣಿ, ಮಹಾಂತೇಶ ತಹಸೀಲ್ದಾರ, ರಾಮಣ್ಣ ಬಾರಕೇರ, ದ್ಯಾಮಣ್ಣ ನಿಗದಿ, ಯಲ್ಲಪ್ಪ ಧರೇಣ್ಣವರ, ಹನುಮಂತ ಸಾರಾವರಿ, ಜಫರುಲ್ಲಾಖಾನ ಜಹಗೀರದಾರ, ಹಜರೇಸಾಬ ಶಿಗ್ಗಾಂವಿ, ಹನುಮಂತ ಚವರಗುಡ್ಡ, ದ್ಯಾಮಣ್ಣ ನಿಗದಿ ಪಾಲ್ಗೊಂಡಿದ್ದರು.
--
ಸಂತ್ರಸ್ತರಿಗೆ ಪರಿಹಾರ ನಿಧಿ
ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯ ನೌಕರರ ಸಹಕಾರಿ ಪತ್ತಿನ ಸಂಘದ ವತಿಯಿಂದ ಉತ್ತರಾಖಂಡದಲ್ಲಿ ಪ್ರಕೃತಿ ವಿಕೋಪ ಒಳಗಾದ ಸಂತ್ರಸ್ತರಿಗೆ ಪರಿಹಾರ ನಿಧಿಗೆ ನೆರವು ನೀಡಲಾಯಿತು. ಕವಿವಿ ನೌಕರರ ಸಹಕಾರಿ ಪತ್ತಿನ ಸಂಘದ ಚೇರ್‌ಮನ್ ಆರ್.ಎಸ್. ಪಾಟೀಲ ಅವರು ರು. 11,111 ಡಿಡಿಯನ್ನು ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಡಾ. ಸುನಿತಾ ಸಿದ್ರಾಮ ಅವರ ಮೂಲಕ ಸಲ್ಲಿಸಿದರು. ಸಂಘದ ಉಪಾಧ್ಯಕ್ಷ ಎಸ್.ಬಿ. ಕುದರಿ, ನಿರ್ದೇಶಕ ವೈ.ಎಂ. ಸಮಗಾರ, ಆರ್.ಜಿ. ಹಿರೇಮಠ, ವಿ.ಎಚ್. ಕಾಂಬಳೆ ಹಾಗೂ ಕಾರ್ಯದರ್ಶಿ ಎಸ್.ಆರ್. ಹಿರೇಮಠ ಇದ್ದರು.
ಮುಂದುವರಿಕೆಗೆ ಆಗ್ರಹ
ಧಾರವಾಡ: ಕವಿವಿ ಕುಲಸಚಿವರನ್ನಾಗಿ ಪ್ರೊ. ಜಿ.ಬಿ. ನಂದನ ಅವರನ್ನೇ ಮುಂದುವರಿಸಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದ ಹಿತರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು. ಈ ಸಂದರ್ಭವೇದಿಕೆ ಗೌರವಾಧ್ಯಕ್ಷ ಇಸ್ಮಾಯಿಲ್ ತಮಟಗಾರ, ಅಧ್ಯಕ್ಷ ತೋಟೇಶ್ವರ ಗುಡದೂರ, ಅಶೋಕ ದೊಡಮನಿ, ವೆಂಕಟೇಶ ಸಗಬಾಲ, ಪಾಡುರಂಗ ಪಮ್ಮಾರ, ಬಿ.ಎಫ್. ಗೊರವನಕೊಳ್ಳ, ಹನುಮಂತ ಅಂಬಿಗೇರ ಇದ್ದರು.