ಇಂದು ರಂಜಾನ್: ಮಾರ್ಗ ಬದಲು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 8
ರಂಜಾನ್ ಹಬ್ಬದ ನಿಮಿತ್ತ ಆ. 9ರಂದು ನಗರದ ವಿವಿಧೆಡೆ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಮ್ಯಾದಾರ ಓಣಿಯಿಂದ ತುಳಜಾ ಭವಾನಿ ವೃತ್ತ, ಪೆಂಡಾರ ಓಣಿ ಹಾಗೂ ತುಳಜಾ ಭವಾನಿ ಗುಡಿಯಿಂದ ದಾಜಿಬಾನಪೇಟೆ ಕಡೆಗೆ, ಕಾಳಮ್ಮನ ಅಗಸಿಯಿಂದ ಮಹಾವೀರ ಗಲ್ಲಿ ಮೂಲಕ ಮೂರುಸಾವಿರ ಮಠ, ಅಂಚಟಗೇರಿ ಓಣಿ, ಪದ್ಮಾ ಟಾಕೀಸ್ ರಸ್ತೆ, ಗೌಳಿಗಲ್ಲಿ, ಚನ್ನಪೇಟ ಮೇನ್ ರೋಡ್, ಚಾಟ್ನಿಮಠ ಕಡೆಗೆ, ಕಮರಿಪೇಟ ಜೈ ಭಾರತ ಸರ್ಕಲ್ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಸ್ಟೇಷನ್ ರಸ್ತೆ, ರಾಧಾಕೃಷ್ಣ ಗಲ್ಲಿ, ಷಾ ಬಜಾರ್, ಬಂಡಿವಾಡ ಬೇಸ್ ಮಸೀದಿ ಕಡೆಯಿಂದ ಹೊಸ ದುರ್ಗದಬೈಲ್ ಕಡೆಗೆ, ಬ್ರಾಡವೇ, ಲ್ಯಾಮಿಂಗಟನ್ ರೋಡ್, ಶಿವಾಜಿ ಚೌಕ್‌ನ ಚಿಟಗುಪ್ಪಿ ವೃತ್ತದ ಕಡೆಗೆ, ಕೊಪ್ಪಿಕರ್ ರಸ್ತೆ ಉಪಯೋಗಿಸಬಹುದು, ಪೆಂಡಾರ್‌ಗಲ್ಲಿ, ಕಾಳಮ್ಮನ ಅಗಸಿ, ಮುಲ್ಲಾ ಓಣಿ, ಡಾಕಪ್ಪ ವೃತ್ತ, ಕೌಲ್‌ಪೇಟ, ಪಿಬಿ ರಸ್ತೆ, ಚಾಟ್ನಿಮಠ ಕ್ರಾಸ್‌ನಿಂದ ಎಂಟಿ ಮಿಲ್, ಕಾರವಾರ ರಸ್ತೆ, ಕೇಶ್ವಾಪೂರ ವೃತ್ತ, ದೇಸಾಯಿ ವೃತ್ತ ಕಡೆಯಿಂದ ಈದ್ಗಾ ಮೈದಾನ ಕಡೆಗೆ, ಕೆ.ಎಚ್. ಪಾಟೀಲ ರಸ್ತೆ, ಅಂಡರ್ ಬ್ರಿಡ್ಜ್, ಅಂಬೇಡ್ಕರ್ ವೃತ್ತ, ಡಾಕಪ್ಪ ವೃತ್ತದ ರಸ್ತೆಗಳಲ್ಲಿ ವಾಹನಗಳು ಚಲಿಸಬಹುದು.
ಮಾರ್ಗ ಬದಲಾವಣೆ: ಗದಗ ಮತ್ತು ರೇಲ್ವೆ ಸ್ಟೇಷನ್ ಕಡೆಯಿಂದ ಬರುವ ವಾಹನಗಳನ್ನು ಪಿಂಟೋ ಪಾಯಿಂಟ್‌ನಿಂದ ದೇಸಾಯಿ ವೃತ್ತದ ಮೂಲಕ ಕಾಟನ್ ಮಾರ್ಕೆಟ್ ಹೊಸೂರಿಗೆ ಬಂದು ಸೇರುವ ಹಾಗೆ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಇಂದಿರಾ ಗಾಜಿನ ಮನೆ ಎದುರು ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ.
ನವಲಗುಂದ ಪಿಂಟೋ ಪಾಯಿ ಂಟ್ ಕಡೆಯಿಂದ ಬರುವ ವಾಹನಗಳನ್ನು ಐಬಿ ಎದುರಿನಿಂದ ಕಾಟನ್ ಮಾರ್ಕೆಟ್ ಮೂಲಕ ಹೊಸೂರು ವೃತ್ತದ ಕಡೆಗೆ ಬಿಡಲಾಗುವುದು. ಕಾಟನ್ ಮಾರ್ಕೆಟ್ ಕಡೆಯಿಂದ ದೇಸಾಯಿ ಕ್ರಾಸ್‌ಗೆ ಬರುವ ವಾಹನಗಳನ್ನು ನವಲಗುಂದ ರಸ್ತೆಗೆ ಕಳುಹಿಸಲಾಗುವುದು. ದೇಸಾಯಿ ಕ್ರಾಸ್‌ದಿಂದ ಪಿಂಟೋ ಪಾಯಿಂಟ್ ಕಡೆಗೆ ಯಾವುದೇ ವಾಹನ ಬಿಡುವುದಿಲ್ಲ.
ಕಮರಿಪೇಟ ಠಾಣೆ ಎದುರು: ಬೆಂಗಳೂರು ಕಡೆಯಿಂದ ಧಾರವಾಡ ಕಡೆಗೆ ಹೋಗುವ ವಾಹನಗಳನ್ನು ಬೈಪಾಸ್ ಮೂಲಕ ಬಿಡಲಾಗುವುದು. ನವಲಗುಂದ ಹಾಗೂ ಗದಗ ಕಡೆ ಹೋಗುವ ವಾಹನಗಳನ್ನು ಮಾತ್ರ ತೊರವಿ ಹಕ್ಕಲ, ಎಂಟಿ ಮಿಲ್, ವಾಣಿ ವಿಲಾಸ ಕ್ರಾಸ್ ಮೂಲಕ ಹೊಸೂರು ವೃತ್ತಕ್ಕೆ ಬಂದು ಸೇರಿ ಅಲ್ಲಿಂದ ಕೆಟಿಸಿ ಕ್ರಾಸ್ ಮುಖಾಂತರ ದೇಸಾಯಿ ವೃತ್ತ, ಕೇಶ್ವಾಪೂರ ಸರ್ವೋದಯ ವೃತ್ತ ಮುಖಾಂತರ ನವಲಗುಂದ ಅಥವಾ ಗದಗ ಕಡೆಗೆ ಬಿಡಲಾಗುವುದು.
ದೇಸಾಯಿ ವೃತ್ತದ ಕಡೆಯಿಂದ ಬರುವ ವಾಹನಗಳನ್ನು ಕೆಸಿ ವೃತ್ತದ ಕಡೆಗೆ ಬಿಡದೆ ಶಾನಭಾಗ ಹಾಗೂ ಗಿರಣಿಚಾಳ, ಎಂಟಿ ಮಿಲ್ ಕ್ರಾಸ್ ಮೂಲಕ ಬೆಂಗಳೂರು ಕಡೆಗೆ ಹಾಗೂ ಧಾರವಾಡ ಕಡೆಗೆ ಬಿಡಲಾಗುವುದು.
ಕಾರವಾರ ರಸ್ತೆ ಚೆಕ್‌ಪೋಸ್ಟ್: ಹಳೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದವರು ಪ್ರಾರ್ಥನೆ ಸಲ್ಲಿಸುವ ಸಮಯದಲ್ಲಿ ಕಲಘಟಗಿ ಕಡೆಯಿಂದ ಹಾಗೂ ಗ್ರಾಮೀಣ ಕಡೆಯಿಂದ ಬರುವ ವಾಹನಗಳಿಗೆ ಇಂಡಿ ಪಂಪ್‌ಗೆ ಹೋಗುವುದನ್ನು ನಿಷೇಧಿಸಲಾಗಿದೆ. ಈ ವಾಹನಗಳು ಬೈಪಾಸ್ ಮುಖಾಂತರ ಸಂಚರಿಸಿ ತಾರಿಹಾಳ ಇಂಟರ್‌ಚೇಂಜ್ ಮೂಲಕ ಹುಬ್ಬಳ್ಳಿ ಪ್ರವೇಶಿಸಬೇಕು. ಬೆಂಗಳೂರು ಕಡೆಯಿಂದ ಬರುವ ವಾಹನಗಳಿಗೂ ಬೈಪಾಸ್ ಮೂಲಕ ಪ್ರವೇಶ ನೀಡಲಾಗುವುದು. ಹಳೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದವರು ಪ್ರಾರ್ಥನೆ ಸಲ್ಲಿಸಿದ ನಂತರ ಕಾರವಾರ ರಸ್ತೆ ಹಾಗೂ ಇನ್ನಿತರ ರಸ್ತೆಗಳಿಂದ ಇಂಡಿ ಪಂಪ್ ಕಡೆಗೆ ಬರುವ ವಾಹನಗಳನ್ನು ಸ್ವಲ್ಪ ಸಮಯದವರೆಗೆ ಕಾರವಾರ ರಸ್ತೆ ಅಂಡರ್ ಬ್ರಿಡ್ಜ್ ಬಳಿ ತಡೆದು, ಬಿಡಲಾಗುವುದು.
ಇತರ ರಸ್ತೆ: ಇನ್ನುಳಿದ ಸಣ್ಣಪುಟ್ಟ ರಸ್ತೆಗಳಿಂದ ಕೆಸಿ ಸರ್ಕಲ್‌ಗೆ ಬರುವ ವಾಹನಗಳನ್ನು ತಡೆಯಲು ಅಲ್ಲಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದು, ಆ ವಾಹನಗಳನ್ನು ವಾಪಸ್ ಅಥವಾ ಬೇರೆ ರಸ್ತೆಗಳ ಮೂಲಕ ಕಳುಹಿಸಲಾಗುವುದು ಎಂದು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.