ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪ್ರತಿ ಹಬ್ಬ ಸೃಷ್ಟಿ ಜತೆಆಚರಿಸಿ: ಹಿರೇಮಠ

Vishwanath S
Updated On : 10 Aug 2013, 11:49 am

ಧಾರವಾಡ: ಪ್ರತಿ ಹಬ್ಬಗಳನ್ನು ಸೃಷ್ಟಿಯೊಂದಿಗೆ ಆಚರಿಸಿದಲ್ಲಿ, ಪರಿಸರಕ್ಕೆ ಒಂದು ಅಮೋಘ ಕೊಡುಗೆ ನೀಡಿದಂತಾಗುತ್ತದೆ ಎಂದು ಪಾಲಿಕೆ ಸದಸ್ಯ ಶಿವು ಹಿರೇಮಠ ಹೇಳಿದರು.
ರಂಜಾನ್ ಹಬ್ಬದ ಅಂಗವಾಗಿ ನಿರತ ಸೇವಾಸಂಸ್ಥೆ ಮತ್ತು ಗ್ರೀನ್ ಆರ್ಮಿ ತಂಡಗಳು ನಗರದ ಬಾಸೆಲ್ ಮಿಶನ್ ಹೆಣ್ಣುಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಪರಿಸರವನ್ನು ಹಾಳು ಮಾಡಿದ್ದು, ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದ ಅವರು, ಮುಸ್ಲಿಂ ಬಂಧುಗಳಿಗೆ ಶುಭಾಷಯ ಕೋರಿದರು.
ಗ್ರೀನ್ ಆರ್ಮಿ ತಂಡದ ಅಧ್ಯಕ್ಷ ಪ್ರಕಾಶ ಗೌಡರ ಮಾತನಾಡಿ, ಈ ಕಾರ್ಯಕ್ರಮಕ್ಕೆ ಬಿಆರ್‌ಟಿಎಸ್ ಸಂಸ್ಥೆ ಸಸಿಗಳನ್ನು ಪೂರೈಸಿದ್ದು ಸಂಸ್ಥೆಗೆ ಅಭಿನಂದನೆ. ಈ ಹಬ್ಬದ ನಿಮಿತ್ತ ನಿರತ ಸೇವಾ ಸಂಸ್ಥೆಯೊಂದಿಗೆ ಸೇರಿ 50ಕ್ಕೂ ಹೆಚ್ಚಿನ ಸಸಿಗಳನ್ನು ನೆಡಲಾಗುವುದು ಎಂದರು. ನಿರತ ಸೇವಾ ಸಂಸ್ಥೆಯ ಅಧ್ಯಕ್ಷ ಅಸ್ಲಂಜಹಾನ ಅಬ್ಬಿಹಾಳ ರಂಜಾನ್ ನಿಮಿತ್ತ ಸಿಹಿ ಹಂಚಿದರು. ಗ್ರೀನ್ ಆರ್ಮಿಯ ಅನಿಲ ಅಳ್ಳೊಳ್ಳಿ, ನಂದೀಶ ಕಡಕೋಳ, ಅನಿಲ್ ಕಿತ್ತೂರ, ನಿರತ ಸೇವಾ ಸಂಸ್ಥೆಯ ಅಲ್ಲಾಭಕ್ಷ ಅಬ್ಬಿಹಾಳ, ಮುಸ್ತಫಾ ಅಬ್ಬಿಹಾಳ, ಅನ್ವರ್ ಯಡಳ್ಳಿ, ಮಂಜುನಾಥ ರಾಯಕರ, ಆಸೀಫ್ ಅರಬ್, ಉದ್ಯಮಿಗಳಾದ ಶಶಿ ಮ್ಯಾಗೇರಿ, ಪ್ರಶಾಂತ ಪೈ, ಬಾಸೆಲ್ ಶಾಲೆಯ ಶಿಕ್ಷಕರಾದ ಆರ್. ರಂಜನಾ, ನಾಗರಾಜ ಆರೇರ್, ಸಂಜೀವ ಹಿರೇಮಠ, ರುದ್ರಯ್ಯ ಕಂಬಿ, ರಾಕೇಶ, ಮಂಜುನಾಥ, ಪ್ರವೀಣಕುಮಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement