ನಗನಾಣ್ಯ ಕಳವು
ಕುಂದಗೋಳ: ಪಟ್ಟಣದಲ್ಲಿ ಶುಕ್ರವಾರ ರಂಜಾನ್ ಹಬ್ಬದ ನಿಮಿತ್ಯ ಸರ್ವ ಹಿಂದೂ-ಮುಸ್ಲಿಂ ಬಾಂಧವರು ಸಂಭ್ರಮದಲ್ಲಿದ್ದರೆ, ಇಲ್ಲಿನ ತಹಸೀಲ್ದಾರ್ ಕಚೇರಿ ಎದುರಿನಲ್ಲಿರುವ ಚನಬಸಪ್ಪ ಶಿವಪ್ಪ ಅಳಗವಾಡಿ ಅವರ ಮಾರುತಿ ಭವನ ಉಪಾಹಾರ ಗೃಹದಲ್ಲಿ ಹಾಡುಹಗಲೇ ನಗನಾಣ್ಯ ಕಳವು ಮಾಡಲಾಗಿದೆ. ಮಧ್ಯಾಹ್ನ ಸುಮಾರಿಗೆ ಈ ಕಳವು ನಡೆದಿದ್ದು, ಉಪಹಾರ ಗೃಹದ ಒಳಾಂಗಣದಲ್ಲಿನ ಬಿದಿರುಗಳೆರಡನ್ನು ಮುರಿದು ಒಳನುಗ್ಗಿ ದೇವರ ಹುಂಡಿಯಲ್ಲಿನ ನಾಣ್ಯ, ಡಬ್ಬಿಯಲ್ಲಿನ ನಗದು ಹಾಗೂ ಡ್ರಾದಲ್ಲಿನ ಹಣ ದೋಚಿದ್ದಾರೆ ಎಂದು ಉಪಾಹಾರ ಗೃಹದ ಮಾಲಿಕ ಚನ್ನಬಸಪ್ಪ ತಿಳಿಸಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ: ಪತಿ, ಅತ್ತೆ, ನಾದಿನಿ ಕೊಡುತ್ತಿದ್ದ ಮಾನಸಿಕ, ದೈಹಿಕ ಕಿರುಕುಳ ತಾಳದೆ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಮೃತಪಟ್ಟ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ತಾಲೂಕಿನ ನರೇಂದ್ರ ಗ್ರಾಮದ ಲಕ್ಷ್ಮಿ ಬಸವಂತಪ್ಪ ಲಾಳಸಂಗಿ (22) ಆತ್ಮಹತ್ಯೆ ಮಾಡಿಕೊಂಡವಳು. ಪತಿ ಬಸವಂತಪ್ಪ ಲಾಳಸಂಗಿ, ಅತ್ತೆ ಶಾಂತವ್ವ, ನಾದಿನಿ ಲಕ್ಷ್ಮಿ ಬೆಳವಡಿ ವಿವಿಧ ಕಾರಣಗಳಿಗೆ ನೀಡುತ್ತಿದ್ದ ಮಾನಸಿಕ, ದೈಹಿಕ ಕಿರುಕುಳದಿಂದ ಬೇಸತ್ತು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆ ತಾಯಿ ರತ್ನವ್ವ ಸೋಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತಾಲೂಕಿನ ಕ್ಯಾರಕೊಪ್ಪ ಗ್ರಾಮದವಳಾದ ಲಕ್ಷ್ಮಿಯನ್ನು ಎರಡು ವರ್ಷಗಳ ಹಿಂದೆ ನರೇಂದ್ರ ಗ್ರಾಮದ ಬಸವಂತಪ್ಪನಿಗೆ ಮದುವೆ ಮಾಡಿಕೊಡಲಾಗಿತ್ತು. ಒಂದು ಮಗು ಕೂಡ ಇದ್ದು, ಪತಿಯ ಮನೆಯಲ್ಲಿ ಆಕೆಗೆ ಸುಖಾಸುಮ್ಮನೆ ಕಿರುಕುಳ ನೀಡಲಾಗುತ್ತಿತ್ತು. ಈ ಕಾರಣದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ದೂರಿನಲ್ಲಿ ಮೃತಳ ತಾಯಿ ಆರೋಪಿಸಿದ್ದಾರೆ. ಗ್ರಾಮೀಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.