ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೀತಿಪಾಠ ಬೋಧಿಸುವುದೇ ಶ್ರಾವಣ

Vishwanath S
Updated On : 11 Aug 2013, 11:48 am

ಕನ್ನಡಪ್ರಭ ವಾರ್ತೆ, ಧಾರವಾಡ, ಆ. 10
ಧರ್ಮ ಸಿದ್ಧಾಂತಗಳ ಧಾರ್ಮಿಕ ತಳಹದಿಯಲ್ಲಿ ಮನುಕುಲದ ಬದುಕಿಗೆ ಸಂಸ್ಕಾರ ಪೂರ್ಣ ನೀತಿಪಾಠದ ಬೋಧನೆ ಮಾಡುವುದೇ ಶ್ರಾವಣ ಮಾಸಾಚರಣೆಯ ಪ್ರಧಾನ ಆಶಯ ಎಂದು ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀ ಶಾಂತಲಿಂಗ ಶಿವಾಚಾರ್ಯರು ಹೇಳಿದರು.                         
ತಾಲೂಕಿನ ಅಮ್ಮಿನಬಾವಿ ಪಂಚಗೃಹ ಮಠದಲ್ಲಿ ಪ್ರಸಕ್ತ ವರ್ಷದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಳ್ಳಲಾದ ಸೊಲ್ಲಾಪುರದ ಶ್ರೀ ಸಿದ್ಧರಾಮ ಶಿವಯೋಗಿಗಳ ಪುರಾಣ ಪ್ರವಚನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಧರ್ಮದಿಂದ ವಿಮುಖಗೊಂಡ ಮಾನವನ ಜೀವನ ಆತ್ಮವಿಲ್ಲದ ಶರೀರದಂತಾಗುತ್ತದೆ ಎಂದರು.
ಬಿಜಾಪುರ ಜಿಲ್ಲೆ ಹರನಾಳ ಹಿರೇಮಠ ಹಾಗೂ ಸುಳ್ಳದ ಪಂಚಗೃಹ ಹಿರೇಮಠದ ಪಟ್ಟಾಧ್ಯಕ್ಷ ಸಿದ್ಧರಾಮ ಶಿವಾಚಾರ್ಯರು ಮಾತನಾಡಿ, ಅನಂತ ಬೇಡಿಕೆಗಳ ಆಗರವಾಗಿರುವ ಭೌತಿಕ ಬದುಕು ವ್ಯಾಪಕ ಒತ್ತಡಗಳಿಂದ ಕೂಡಿ ಮನಶಾಂತಿಯನ್ನು ಕಲಕುತ್ತದೆ. ಇದಕ್ಕೆ ಪರಿಹಾರವಾಗಿ ಮಾನವನ ಅಂತರಂಗದ ಬದುಕಿನಲ್ಲಿ ನಿರಂತರ ಬೆಳಗನ್ನು ತುಂಬಲು ಸೊಲ್ಲಾಪುರದ ಶ್ರೀಸಿದ್ಧರಾಮ ಶಿವಯೋಗಿಗಳಂಥ ಮಹಾಪುರುಷರ ಆದರ್ಶ ಮೆಲುಕು ಹಾಕುವ ಅತ್ಯಮೂಲ್ಯ ಅವಕಾಶ ಶ್ರಾವಣ ಮಾಸಾಚರಣೆ ಎಂದರು.
ಶಿವಾನಂದಸ್ವಾಮಿ ಹಿರೇಮಠ, ಗುರುಮೂರ್ತಿ ಯರಗಂಬಳಿಮಠ, ಬಸಯ್ಯ ಗುಡಿ, ಡಾ. ಬಸವರಾಜ ಗಾಣಿಗೇರ, ಬಿ.ಸಿ. ಕೊಳ್ಳಿ, ಬಸವಣ್ಣೆಪ್ಪ ಹೊಟ್ಟಿ, ಚಂಬಣ್ಣ ಉಂಡೋಡಿ, ಶಿವಪ್ಪ ಬೆಣ್ಣಿ, ಚಂದ್ರು ಶೆಟ್ಟರ, ಅಶೋಕ್ ಕುಸುಗಲ್ಲ, ಗೂಳಪ್ಪ ಪೂಜಾರ, ಶಿವಪ್ಪ ಹೂಲಿ, ಗೂಳೇಶಪ್ಪ ಮೇಟಿ, ಶಿವಪ್ಪ ಹಂಚಿನಾಳ, ಹುಲಿಯಪ್ಪ ಜೀವಾಪುರ, ಬಸಣ್ಣ ಯಡಳ್ಳಿ, ಈರಪ್ಪ ಧನಶೆಟ್ಟಿ ಇದ್ದರು.
ಇದೇ ವೇಳೆ ಗಾಯಕ ಬಸವರಾಜ ಹೂಗಾರ ವಚನ ಸಂಗೀತ ಪ್ರಸ್ತುತಪಡಿಸಿದರು. ಮಡಿವಾಳಯ್ಯ ಶಹಪುರಮಠ ತಬಲಾ ಸಾಥ್ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement