ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರಿಕ್ರಿಯೇಷನ್ ಕ್ಲಬ್ ಉದ್ಘಾಟನೆಗೆ ಅವಕಾಶ ನೀಡದಂತೆ ಮನವಿ

Vishwanath S
Updated On : 11 Aug 2013, 11:46 am

ಹುಬ್ಬಳ್ಳಿ: ಸವಾಯಿ ಗಂಧರ್ವ ಹಾಲ್ ಬಳಿಯ ಜಿಮಖಾನಾ ಅಸೋಸಿಯೇಷನ್ ಜಾಗದ ಬಗ್ಗೆ ವಿವಾದವಿದ್ದು, ಈ ಸಮಸ್ಯೆ ಪರಿಹಾರವಾಗುವವರೆಗೂ ರಿಕ್ರಿಯೇಷನ್ ಕ್ಲಬ್ ಉದ್ಘಾಟನೆಗೆ ಪೊಲೀಸ್ ಇಲಾಖೆ ಅವಕಾಶ ನೀಡಬಾರದು ಎಂದು ಕನ್ನಡಪರ ಮಹಾಮಂಡಳ ಅಧ್ಯಕ್ಷ ಡಿ. ಗೋವಿಂದರಾವ್ ಅವರು ಶನಿವಾರ ಡಿಸಿಪಿ ಸುಭಾಷ್ ಗುಡಿಮನಿ ಅವರಿಗೆ ಮನವಿ ಸಲ್ಲಿಸಿದರು.
1915ರಿಂದ ಈ ಜಾಗವನ್ನು ಸಾರ್ವಜನಿಕರ ಕ್ರೀಡೆಗೊಸ್ಕರ ಈ ಜಾಗವನ್ನು ಮೀಸಲಿಡಲಾಗಿತ್ತು. ಆದರೆ, ಇತ್ತೀಚೆಗೆ ಕೆಲವು ರಾಜಕೀಯ ಮುಖಂಡರು ಕೋಟ್ಯಂತರ ಮೌಲ್ಯದ ಈ ಜಾಗವನ್ನು ಮೋಜು ಮಸ್ತಿ ಮಾಡುವುದಕ್ಕೆ ಎಂದು ರಿಕ್ರಿಯೇಷನ್ ಕ್ಲಬ್ ಮಾಡಿಕೊಳ್ಳುವತ್ತ ಗಮನ ಕೇಂದ್ರೀಕರಿಸಿದ್ದು, ಕ್ಲಬ್ ಸದಸ್ಯತ್ವ ಪಡೆಯುವುದಕ್ಕೆ ಲಕ್ಷಾಂತರ ರು. ಶುಲ್ಕ ನಿಗದಿ ಮಾಡಲಾಗಿದೆ.
ಜಿಮಖಾನಾ ಅಸೋಸಿಯೇಷನ್‌ಗೆ ಸೇರಿರುವ ಜಾಗವನ್ನು ಕಬಳಿಸುವುದಕ್ಕೆ ನಡೆಯುತ್ತಿರುವ ಹುನ್ನಾರದ ವಿರುದ್ಧ ಈಗಾಗಲೇ ಅನೇಕ ಸಂಘಟನೆಗಳು ತಮ್ಮ ವಿರೋಧ ವ್ಯಕ್ತಪಡಿಸಿದ್ದು, ಈ ಸಮಸ್ಯೆ ಪರಿಹಾರವಾಗುವವರೆಗೆ ಕ್ಲಬ್ ಉದ್ಘಾಟನೆಗೆ ಇಲಾಖೆ ಅವಕಾಶ ನೀಡಬಾರದು ಒಂದು ವೇಳೆ ಅವಕಾಶ ನೀಡಿದ್ದಲ್ಲಿ ಅದರ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಡಿ. ಗೋವಿಂದರಾವ್ ಅವರು ಮನವಿಯಲ್ಲಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement