ಉಚಿತ ಕಂಪ್ಯೂಟರ್ ತರಬೇತಿ
ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವ ನಿಮಿತ್ತ ನಗರದ ಭಾರತೀಯ ಕಂಪ್ಯೂಟರ್ ಅಕಾಡೆಮಿಯಿಂದ ಎಸ್ಸೆಸ್ಸೆಲ್ಸಿ ಪಾಸಾದ ಎಸ್ಸಿ, ಎಸ್ಟಿ 20 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 40 ದಿನ ಉಚಿತ ಕಂಪ್ಯೂಟರ್ ತರಬೇತಿ ಹಮ್ಮಿಕೊಂಡಿದೆ. ಆ. 15ರೊಳಗೆ ಭಾಸ್ಕರ್ ಜಿತೂರಿ ಭಾರತೀಯ ಕಂಪ್ಯೂಟರ್ ಅಕಾಡೆಮಿ ನಂ. 3, 1ನೇ ಮಹಡಿ, ತುಳಜಾಭವಾನಿ ಮಂದಿರ ಕಾಂಪ್ಲೆಕ್ಸ್, ದಾಜಿಬಾನ್ ಪೇಟ್ ಈ ವಿಳಾಸಕ್ಕೆ ಅರ್ಜಿ ಕಳಿಸಿ. ಮಾಹಿತಿಗೆ 0836-2367578, 9880550213 ಸಂಪರ್ಕಿಸಿ.
ದೇಶಭಕ್ತಿ ಗೀತೆ ಕಾರ್ಯಕ್ರಮ
ಹುಬ್ಬಳ್ಳಿ: ಇಂಡಿಯಾ ಅಗೇನಸ್ಟ್ ಕರಪ್ಶನ್, ಗಂಗೂಬಾಯಿ ಹಾನಗಲ್ ಮ್ಯೂಜಿಕ್ ಫೌಂಡೇಷನ್ ಆಶ್ರಯದಲ್ಲಿ ಆ. 15ರಂದು ಆಯೋಜಿಸಿದೆ. ನೃತ್ಯ, ದೇಶಭಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ಹೆಸರು ನೋಂದಾಯಿಸಿ ಎಂದು ಶೈಲೇಂದ್ರಕುಮಾರ್ ಪಾಟೀಲ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 9986358941 ಸಂಪರ್ಕಿಸಿ.