ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ತಾಲೂಕು ವಕೀಲರ ಭವನ ನಿರ್ಮಾಣ: ಶಾಸಕ ಶಿವಳ್ಳಿ

Lingaraj Badiger
Updated On : 12 Aug 2013, 11:27 am

ಕುಂದಗೋಳ: ತಾಲೂಕಿನಲ್ಲಿರುವ ವಕೀಲರಿಗೆ ಮೂಲ ಸೌಲಭ್ಯಗಳೊಂದಿಗೆ ತಾಲೂಕು ಕೇಂದ್ರ ಕುಂದಗೋಳದಲ್ಲಿ ವಕೀಲರ ಭವನ ನಿರ್ಮಿಸಿಕೊಡುವುದಾಗಿ ಶಾಸಕ ಸಿ.ಎಸ್. ಶಿವಳ್ಳಿ ಭರವಸೆ ನೀಡಿದರು. ಅವರು ಪಟ್ಟಣದ ಮುನ್ಸಿಪಲ್ ನ್ಯಾಯಾಲಯ ಕಟ್ಟಡದ ಕಚೇರಿಯಲ್ಲಿ ತಾಲೂಕು ವಕೀಲರ ಸಂಘದಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ವಕೀಲರ ಸಹಕಾರ ನನ್ನ ಗೆಲವಿಗೆ ಕಾರಣವಾಗುವಲ್ಲಿ ಪಾತ್ರವಹಿಸಿದೆ. ಅದರಂತೆ ಇನ್ನು ಮುಂದೆಯೂ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನನ್ನ ಮೇಲಿರಲಿ ಎಂದು ಹೇಳಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ವೈ. ದೇವರಮನಿ ಮಾತನಾಡಿದರು. ಅರವಿಂದ ಕಟಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ವಕೀಲರಾದ ಜಿ.ಬಿ. ಸೊರಟೂರ, ಐ.ಬಿ. ಬೆಟದೂರ, ಎಂ.ಐ. ನಲವಡಿ, ಬಿ.ಪಿ. ಪಾಟೀಲ, ವಿ.ವಿ. ಕೂಬಿಹಾಳ, ಪಿ.ಎಸ್. ಸೊರಟಿ, ಪಿ.ಪಿ. ಕೊಕಾಟೆ, ಐ.ಎಸ್. ಬಂಡಿವಾಡ, ಐ.ಎಂ. ಕೋಣನವರ, ಎಸ್.ವೈ. ಪಾಟೀಲ ಇದ್ದರು. ವಕೀಲ ವಿ.ಟಿ. ನಾಡಗೇರ ನಿರೂಪಿಸಿ, ಸ್ವಾಗತಿಸಿದರು. ಆರ್.ಎನ್. ಕಮತರ ವಂದಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement