ಪಂಚಗೃಹ ಹಿರೇಮಠದಲ್ಲಿ ಪುರಾಣ
ನವಲಗುಂದ: ಶ್ರಾವಣ ಮಾಸದ ಅಂಗವಾಗಿ ಇಲ್ಲಿನ ಪಂಚಗ್ರಹ ಹಿರೇಮಠದಲ್ಲಿ ಸಿದ್ಧೇಶ್ವರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಶ್ರೀ ಚನ್ನಬಸವೇಶ್ವರ ಶಿವಯೋಗಿಗಳಿಂದ ಪುರಾಣ ಪ್ರಾರಂಭಿಸಲಾಗಿದೆ.
ಪ್ರತಿದಿನ ಬೆಳಗ್ಗೆ 7.15ಕ್ಕೆ ಪ್ರಾರಂಭವಾಗುವ ಪ್ರವಚನವನ್ನು ಗದುಗಿನ ಶಿವಾನಂದ ದೇಸಾಯಿ ನಡೆಸಿಕೊಡಲಿದ್ದಾರೆ. ವಿದ್ಯಾಶಂಕರ ದಿಕ್ಷೀತ್ ಹಾಗೂ ಹನುಮಂತಪ್ಪ ಹೂಗಾರ ಸಂಗೀತ ಸೇವೆ ನೀಡಲಿದ್ದಾರೆ. ಒಂದು ತಿಂಗಳವರೆಗೆ ಪ್ರತಿನಿತ್ಯ ಶ್ರೀ ಸಿದ್ದೇಶ್ವರರ ಗದ್ದುಗೆಗೆ ವೇ.ಮೂ.ಮಲ್ಲಿಕಾರ್ಜುನ ಶಾಸ್ತ್ರಿ ಸುಬೇದಾರಮಠ ಇವರಿಂದ ಅಭಿಷೇಕ ಹಾಗೂ ರುದ್ರಪಠಣ ಜರುಗಲಿದೆ.