15ರಂದು ಅಂಗವಿಕಲಮಹಿಳೆಯರಿಗೆ ತರಬೇತಿ
ಧಾರವಾಡ: ಪಿಯುಸಿ ಪರೀಕ್ಷೆ ಪಾಸಾಗಿರುವ ಮಹಿಳಾ ನಿರುದ್ಯೋಗಿ ಅಂಗವಿಕಲರಿಗೆ ಹಾಗೂ ಬಡ ಮಹಿಳೆಯರಿಗೆ ಕಂಪ್ಯೂಟರ್, ಸ್ಪೋಕನ್ ಇಂಗ್ಲಿಷ್, ಕಾಲ್ ಸೆಂಟರ್ ಕುರಿತು ಎರಡು ತಿಂಗಳ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆ. 15ರಂದು ಮುಂಜಾನೆ 11ಕ್ಕೆ ಆಸಕ್ತರು ದಾಖಲೆಗಳೊಂದಿಗೆ ಧಾರವಾಡದ ಗಾಂಧಿನಗರದಲ್ಲಿನ ದಾಸಪ್ಪ ಬಿಲ್ಡಿಂಗ್‌ನಲ್ಲಿರುವ ಸಮರ್ಥನಂ ಸಂಸ್ಥೆ ಸಂಪರ್ಕಿಸಲು ಕಚೇರಿ ದೂ. 0836 - 2435749 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಅಂಗವಿಕಲರ ಕ್ಷೇತ್ರದಲ್ಲಿಸಾಧಕರಿಗೆ ರಾಷ್ಟ್ರಪ್ರಶಸ್ತಿ
ಧಾರವಾಡ: ಅಂಗವಿಕಲ ಕಲ್ಯಾಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ರಾಷ್ಟ್ರಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆ. 17 ಕೊನೆ ದಿನ. ಸ್ವಯಂ ಉದ್ಯೋಗಿಗಳು ಸೇರಿದಂತೆ ಶ್ರೇಷ್ಠ ನೌಕರರು, ಉದ್ಯೋಗದಾತರು, ಮಾದರಿ ವ್ಯಕ್ತಿ, ಶ್ರೇಷ್ಠ ಸಂಸ್ಥೆ, ವ್ಯಕ್ತಿ, ಪರಿಹಾರ ಒದಗಿಸುವ ನವೀನ ತಂತ್ರ ಉಪಯೋಗಿಸಿದವರಿಗೆ ವಿಕಲರಾಗಿದ್ದರೂ ಪ್ರತಿಭಾವಂತ ವ್ಯಕ್ತಿ, ವಯಸ್ಕ, ಉತ್ತಮ ಬ್ರೈಲ್ ಮುದ್ರಣಾಲಯ, ಉತ್ತಮ ಸಂಪರ್ಕ ಸೌಲಭ್ಯ ಹೊಂದಿರುವ ವೆಬ್‌ಸೈಟ್ ಇವೇ ರಂಗಗಳಲ್ಲಿ ಪ್ರಶಸ್ತಿ ನೀಡಲಾಗುವುದು. ಮಾಹಿತಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ ಸಂಪರ್ಕಿಸಿ.