ಅಂಗಮಾರಿ ರೋಗ ತಡೆಯಿರಿ
ಧಾರವಾಡ: ಆಲೂಗಡ್ಡೆ ಬೆಳೆಗೆ ತಗಲುವ ಅಂಗಮಾರಿ ರೋಗ ತಡೆಗಟ್ಟಲು ಶೀಲಿಂಧ್ರನಾಶಕವನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ. ಆಲೂಗಡ್ಡೆ ವಿಶೇಷ ಪ್ಯಾಕೇಜ್ ಯೋಜನೆಯಡಿ ರೈತರು ವಿಮೆಯ ಸಹಾಯಧನಕ್ಕಾಗಿ ಇಲಾಖೆಯನ್ನು ಸಂಪರ್ಕಿಸಬೇಕು. ಶಿಲಿಂಧ್ರನಾಶಕ ಹಾಗೂ ಹೆಚ್ಚಿನ ಮಾಹಿತಿಗಾಗಿ ಧಾರವಾಡದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಂಪರ್ಕಿಸಲು ತಿಳಿಸಲಾಗಿದೆ.
ಇಂದಿನಿಂದ ಸೆ. 12ರ ವರೆಗೆ ಜಾನುವಾರಿಗೆ ಲಸಿಕೆ ಕಾರ್ಯಕ್ರಮ
ಧಾರವಾಡ: ಜಿಲ್ಲಾದ್ಯಂತ ಆ. 13ರಿಂದ ಸೆಪ್ಟೆಂಬರ್ 12ರ ವರೆಗೆ ಪಶುವೈದ್ಯ ಇಲಾಖೆಯು ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲು ಬಾಯಿ ರೋಗದ ಪ್ರತಿಬಂಧಕ ಲಸಿಕೆ ಹಾಕುವ ಕಾರ್ಯಕ್ರಮ ಜಾರಿಗೊಳಿಸಿದೆ. ಈ ಕುರಿತು ಗ್ರಾಮಮಟ್ಟದಲ್ಲಿ ಪ್ರಚಾರಕೈಗೊಳ್ಳಲಾಗಿದ್ದು, ಲಸಿಕೆ ಹಾಕಲು ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ರೈತಬಾಂಧವರು ನಿಗದಿತ ದಿನ ಹಾಗೂ ಸಮಯದಲ್ಲಿ ತಮ್ಮ ದನಕರು ಹಾಗೂ ಎಮ್ಮೆಗಳಿಗೆ ಕಾಲುಬಾಯಿ ರೋಗ ಪ್ರತಿಬಂಧಕ ಲಸಿಕೆ ತಪ್ಪದೆ ಹಾಕಿಸಲು ಇಲಾಖೆಯ ಉಪನಿರ್ದೇಶಕರು ಮನವಿ ಮಾಡಿದ್ದಾರೆ.
--