ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಗುಡಗೇರಿ ಗ್ರಾಮೀಣರ ರಂಜಿಸಿದ ಕ್ರೀಡೆ

Lingaraj Badiger
Updated On : 13 Aug 2013, 10:55 am

ಕನ್ನಡಪ್ರಭ ವಾರ್ತೆ, ಗುಡಗೇರಿ, ಆ. 12
ಗ್ರಾಮದ ಗೋಣಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. 2 ಕ್ವಿಂಟಲ್ 60 ಕೆಜಿ ತೇರಿನ ಗಾಲಿಯನ್ನು ಎತ್ತುವಲ್ಲಿ ಅನೇಕ ಯುವಕರು ಪ್ರಯತ್ನಿಸಿ ವಿಫಲರಾದರು. ಆನಂತರ ಬಸವರಾಜ ದಾನಣ್ಣವರ ಹಾಗೂ ಮಂಜು ಚಿಗರಿ ಗಾಲಿಯನ್ನು ಮೇಲಕ್ಕೆತ್ತಿ ನಿಲ್ಲಿಸಿ ನೆರೆದಿದ್ದ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಇನ್ನು 80 ಕೆಜಿ ಸಾಂಬ್ರಾಣಿ ಕಲ್ಲನ್ನು ಒಂದೇ ಕೈಯಿಂದ ಮೇಲಕ್ಕೆತ್ತುವ ಸ್ಪರ್ಧೆ ಹಾಗೂ 90 ಕೆಜಿ ದುಂಡಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ 50ರಿಂದ 60 ಯುವಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement