ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೌಕರರ ಸಂಘಕ್ಕೆ ಗುರಿಕಾರ ಮರು ಆಯ್ಕೆ

Lingaraj Badiger
Updated On : 13 Aug 2013, 10:55 am

ಕನ್ನಡಪ್ರಭ ವಾರ್ತೆ, ಧಾರವಾಡ, ಆ. 12
ರಾಜ್ಯ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಬಸವರಾಜ ಗುರಿಕಾರ 47 ಮತಗಳಿಂದ ಗೆಲವು ಸಾಧಿಸಿದ್ದಾರೆ.
ಐದು ವರ್ಷಗಳ ಆಡಳಿತಾವಧಿ ಇರುವ ಈ ಸ್ಥಾನಕ್ಕೆ ಬಸವರಾಜ ಗುರಿಕಾರ ಹಾಗೂ ಕೆ.ಎಂ. ತದ್ದೇವಾಡಿ ಅವರು ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಒಟ್ಟು 66 ಮತಗಳಲ್ಲಿ ಗುರಿಕಾರ ಅವರಿಗೆ 56 ಹಾಗೂ ತದ್ದೇವಾಡಿ ಅವರಿಗೆ ಒಂಭತ್ತು ಮತಗಳು ಚಲಾವಣೆಯಾಗಿದ್ದು, ಒಂದು ಮತ ಅನರ್ಹಗೊಂಡಿದೆ. ಈ ಮೂಲಕ ನಿರಂತರವಾಗಿ ಗುರಿಕಾರ ಅವರು ಮೂರನೇ ಬಾರಿಗೆ ಗೆಲವು ಸಾಧಿಸಿದಂತಾಯಿತು.
ಇಲ್ಲಿನ ನೌಕರರ ಸಂಘದ ಆವರಣದಲ್ಲಿ ನಡೆದ ಚುನಾವಣೆಯ ಫಲಿತಾಂಶ ಘೋಷಣೆಯಾಗುವ ತಡವೇ ಗುರಿಕಾರ ಅವರ ಅಭಿಮಾನಿಗಳು ಬಣ್ಣ ಎರಚಿ ಅವರನ್ನು ಹೊತ್ತು ಸಂಭ್ರಮಿಸಿದರು. ಆಯ್ಕೆದ ಬಸವರಾಜ ಗುರಿಕಾರ ಅವರಿಗೆ ಶಿಕ್ಷಣ ಇಲಾಖೆಯ ಕೆ. ಜಗುಚಂದ್ರ, ಎಂ.ಸಿ. ಸವಣೂರ, ಎಚ್.ಬಿ. ದಳವಾಯಿ, ಕವಳಿಕಾಯಿ, ವಿ.ಜಿ. ಕಂಬಿ, ಎ.ಬಿ. ಚನ್ನವೀರಗೌಡ್ರ, ಶಾಂತಾ ಶೀಲವಂತ, ಲತಾ ಮಳ್ಳೂರ, ಗಿರಿಜಾ ಪಾಟೀಲ ಹಾಗೂ ಪಶು ಸಂಗೋಪನಾ ಇಲಾಖೆಯ ಮಾರ್ತಾಂಡಪ್ಪ ಕತ್ತಿ, ಗಿರೀಶ ಪಾಟೀಲ, ಗಂಗಾಧರ ಮಠಪತಿ, ಜಲಾನಯನ ಇಲಾಖೆಯ ಎಸ್.ಕೆ. ರಾಮದುರ್ಗ, ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ದಿವಾಕರ ಪುನೀತ, ವಿಲ್ಸನ್ ಮೈಲಿ, ಎಸ್.ಎಂ. ಹೂಗಾರ, ಪ್ರವೀಣ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement