ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪರಿಹಾರಕ್ಕೆ ಒತ್ತಾಯಿಸಿ ರ್ಯಾಲಿ

Lingaraj Badiger
Updated On : 13 Aug 2013, 10:55 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 12
ಆ್ಯಸಿಡ್ ದಾಳಿಗೆ ತುತ್ತಾದ ನಗರದ ಮೂವರು ಆಟೋ ಚಾಲಕರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಹುಬ್ಬಳ್ಳಿ ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ರ್ಯಾಲಿ ನಡೆಸಿತು.
ಆ್ಯಸಿಡ್ ದಾಳಿಗೊಳಗಾದ ಕುಟುಂಬಕ್ಕೆ ಜಿಲ್ಲಾಧಿಕಾರಿ, ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಅಥವಾ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಘೋಷಿಸುವ ಮೂಲಕ ಗಾಯಗೊಂಡಿರುವ ಆಟೋ ಚಾಲಕರಿಗೆ ನೆರವು ನೀಡಬೇಕೆಂದು ಕೋರಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಸಂಘದ ಸದಸ್ಯರು ಬಳಿಕ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಮುಸ್ತಾಕ್ ಖರ್ಜಗಿ, ಪುಂಡಲೀಕ ಬಡಿಗೇರ, ಚಿದಾನಂದ ಸವದತ್ತಿ, ಬಸವರಾಜ ಉಣಕಲ್, ಯಲ್ಲಪ್ಪ ಈರನಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
--
ಸಿಎಂ ಸಿದ್ದರಾಮಯ್ಯ ಜನ್ಮದಿನಾಚರಣೆ
ಧಾರವಾಡ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 66ನೇ ಹುಟ್ಟುಹಬ್ಬವನ್ನು ಜಿಲ್ಪಾಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸುವ ಮೂಲಕ ಕನಕ ಸಮಾಜ ವೇದಿಕೆಯಿಂದ ಸೋಮವಾರ ಆಚರಿಸಲಾಯಿತು. ಬಡ ಜನತೆಯಲ್ಲಿ ಮುಖ್ಯಮಂತ್ರಿಗಳು ವಿಶೇಷ ಕಾಳಜಿ ಇಟ್ಟುಕೊಂಡಿದ್ದು, ಸದಾಕಾಲ ರಾಜ್ಯದ ಏಳ್ಗೆಗೆ ಅವರು ದುಡಿಯಲಿ ಎಂಬ ಕಾರಣದಿಂದ ಬಡವರೆ ಇರುವ ಈ ಆಸ್ಪತ್ರೆಯಲ್ಲಿ ಹಣ್ಣು ವಿತರಿಸಿ ಅವರ ಜನ್ಮದಿನಾಚರಣೆ ಆಚರಿಸಲಾಯಿತು ಎಂದು ವೇದಿಕೆ ಅಧ್ಯಕ್ಷ ಹೇಮಂತ ಗುರ್ಲಹೊಸೂರ ಹೇಳಿದರು. ಜಿಲ್ಲಾಸ್ಪತ್ರೆ ಸರ್ಜನ್ ಡಾ. ಕಡಕೋಳ, ಪ್ರಕಾಶ ಉಡಕೇರಿ, ರಾಬರ್ಟ್, ರಾಜು ಢವಳೆ, ನಾರಾಯಣ ಎಂ.ಎನ್., ಹನುಮಂತ ಮೊರಬ, ಕಿರಣ ಪೂಜಾರ, ರಾಮಚಂದ್ರ ಸೋಲಂಕಿ, ಶಿವಾನಂದ ಬಾವಿಕಟ್ಟಿ, ಮಂಜುನಾಥ ಹಿರೇಮಠ, ಶಂಕರ ಹೆಬಸೂರ, ಶಬ್ಬೀರ ಅತ್ತಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement