ಸದ್ಭಾವನಾ ಜ್ಯೋತಿಗೆ ಸ್ವಾಗತ
ಧಾರವಾಡ: ಸೋಮವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ ರಾಜೀವಗಾಂಧಿ ಸದ್ಭಾವನಾ ಜ್ಯೋತಿಯನ್ನು ಕಾಂಗ್ರೆಸ್ ವತಿಯಿಂದ ಸ್ವಾಗತಿಸಲಾಯಿತು.
ನಗರದ ವಿವೇಕಾನಂದ ವೃತ್ತದಲ್ಲಿ ಶಾಸಕ ವಿನಯ ಕುಲಕರ್ಣಿ ನೇತೃತ್ವದಲ್ಲಿ ಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು. ವಿನಯ ಕುಲಕರ್ಣಿ ಮಾತನಾಡಿ, ಪ್ರತಿ ವರ್ಷದಂತೆ ಸದ್ಭಾವನೆ ಮೂಡಿಸುವ ಸಲುವಾಗಿ ಪೆರಂಬೂರಿನಿಂದ ಆರಂಭವಾಗಿ ದೇಶಾದ್ಯಂತ ಈ ಜ್ಯೋತಿ ಸಂಚರಿಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಈ ಮೂಲಕ ಏಕತೆ ಮೂಡಿಸುತ್ತಿದೆ ಎಂದರು.
ಮಹಾನಗರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ ಘಾಟಗೆ, ಮುಖಂಡರಾದ ಪ್ರೊ ಐ.ಜಿ. ಸನದಿ, ನಾಗರಾಜ ಛಬ್ಬಿ, ಪಾಲಿಕೆ ಸದಸ್ಯರಾದ ಯಾಸೀನ್ ಹಾವೇರಿಪೇಟ, ಸುಭಾಸ ಶಿಂಧೆ, ಬುರಾನ ಗೌಳಿ, ರಸೂಲ ಧಾರವಾಡಕರ, ಅನಂದ ಜಾಧವ, ಆನಂದ ಮೂಶಣ್ಣವರ, ಮುಲ್ಲಾ ಮಿಶ್ರಿಕೋಠಿ, ಶ್ರೀಧರ ಶೇಟ, ಆನಂದ ಸಿಂಗನಾಥ, ಭಾಷಾ ಬಳ್ಳಾರಿ, ಮನೋಜಕುಮಾರ ಕರ್ಜಗಿ, ಬಾಬು ಗೌಳಿ, ಪಾರಿಶ್ವನಾಥ ಪತ್ರಾವಳಿ ಇದ್ದರು.