ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದು ಬಂದ್‌ಗೆ ಕರೆ

Lingaraj Badiger
Updated On : 14 Aug 2013, 11:46 am

ನವಲಗುಂದ: ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕಳಸಾ ಬಂಡೂರಿ ಹಳ್ಳಗಳನ್ನು ಮಲಪ್ರಭೆಗೆ ಸೇರಿಸುವಂತೆ ಸರ್ಕಾರಕ್ಕೆ ಎಚ್ಚರಿಸಲು ಆ. 14ರಂದು ನವಲಗುಂದ ಬಂದ್‌ಗೆ ಕರೆ ನೀಡಲಾಗಿದೆ. ಪಕ್ಷಾತೀತವಾಗಿ ಎಲ್ಲ ರೈತಪರ ಸಂಘಟನೆಗಳು ಬಂದ್ ಕರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕ.ರಾ.ರೈ.ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ತಾಲೂಕು ಅಧ್ಯಕ್ಷ ಹನಮಂತಗೌಡ ಹುಡೇದ, ಬಿ.ವಿ. ಸೋಮಾಪುರ, ವಿಜಯ ಕುಲಕರ್ಣಿ, ಗಂಗಾಧರ ಮೇಟಿ, ಶೋಭಾ ಚಲವಾದಿ, ಶಂಕ್ರಪ್ಪ ಕರಕನ್ನವರ, ಅಮೀನ ದಿಡ್ಡಿ ಮನವಿ ಮಾಡಿದ್ದಾರೆ.
ನಾಳೆ ಜಾಗೃತಿ ಜಾಥಾ
ಧಾರವಾಡ: ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಮಳೆ ನೀರು ಸಂಗ್ರಹಣೆ, ಪ್ಲಾಸ್ಟಿಕ್ ಬಳಕೆ ನಿಷೇಧ, ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತು ಜಾಥಾ ಕಾರ್ಯಕ್ರಮ ಆ. 15ರಂದು ಹಮ್ಮಿಕೊಳ್ಳಲಾಗಿದೆ.  ಬೆಳಗ್ಗೆ 9ಕ್ಕೆ ನೆಹರೂ ನಗರದಿಂದ ಜಾಥಾ ಪ್ರಾರಂಭ. ಸಮಾರೋಪವು ಬೆಳಗ್ಗೆ 11ಕ್ಕೆ ಧಾರವಾಡದ ಕರ್ನಾಟಕ ವಿವಿಯ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ನಡೆಯುವುದು. ಅಧ್ಯಕ್ಷತೆಯನ್ನು ಕೇಂದ್ರದ ನಿರ್ದೇಶಕರಾದ ಪ್ರೊ. ಉದಯ ರಾಯಕರ್ ವಹಿಸುವರು. ಪ್ರತಿಜ್ಞಾ ಬೋಧನೆಯನ್ನು ಜಿಲ್ಲಾ ಪರಿಸರ ಅಧಿಕಾರಿ ವಿಜಯಕುಮಾರ ಕಡಕಭಾವಿ ಮಾಡುತ್ತಾರೆ. ಅತಿಥಿಗಳಾಗಿ ಎಸ್. ಸೀತಾರಾಮ ಶೆಟ್ಟಿ, ನಾಗರಿಕ ಪರಿಸರ ಸಮಿತಿಯ ಶಂಕರ ಕುಂಬಿ, ಈಶ್ವರ ನಾಯಕ ಆಗಮಿಸುವರು. ಪರಿಸರ ಜಾಗೃತಿ ಜಾಥಾಗಳು ಮೂರು ಗುಂಪುಗಳಾಗಿ ನೆಹರುನಗರ, ಗಣೇಶನಗರ, ಸಪ್ತಾಪುರ ಭಾಗಗಳಿಂದ ಹೊರಟು ಪ್ರಾದೇಶೀಕ ವಿಜ್ಞಾನ ಕೇಂದ್ರದಲ್ಲಿ ಸೇರುತ್ತವೆ ಎಂದು ಡಾ. ಬಾಳಣ್ಣ ಶೀಗಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಧ್ವಜಾರೋಹಣ
ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕು ಸಾರ್ವಜನಿಕ ಸ್ವಾತಂತ್ರ್ಯೋತ್ಸವ ಸಮಿತಿ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಅ.15ರಂದು ಬೆಳಗ್ಗೆ 9ಕ್ಕೆ ತಹಸೀಲ್ದಾರ್ ಜಿ.ಕೆ. ಪಾಟೀಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸ್ವಾತಂತ್ರೋತ್ಸವದ ಅಂಗವಾಗಿ ಶಾಲಾ-ಕಾಲೇಜು, ಪೊಲೀಸ್ ಎನ್‌ಸಿಸಿ ಮುಂತಾದ ತುಕಡಿಗಳಿಂದ ಪಥ ಸಂಚಲನ, ಗೌರವರಕ್ಷೆ, ಪರೇಡ್ ಪರಿವೀಕ್ಷಣೆಯ ನಂತರ ಸ್ವಾತಂತ್ರ್ಯೋತ್ಸವ ಸಂದೇಶ ಕಾರ್ಯಕ್ರಮವಿದೆ.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ
ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಕಟ್ಟಡದ ಆವರಣದಲ್ಲಿ ಆ. 15ರ ಬೆಳಗ್ಗೆ 9ಕ್ಕೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಜರುಗಲಿದೆ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಧ್ವಜಾರೋಹಣ ನೆರವೇರಿಸುವರು. ಆನಂತರ ಹಿರಿಯ, ನೈಪುಣ್ಯ ಹೊಂದಿರುವ ನೇಕಾರರನ್ನು, ನಿಗಮದ ಉತ್ಪಾದನೆ ವಿಭಾಗದಲ್ಲಿ ಹೆಚ್ಚಿನ ಸಾಧನೆಗೈದ ನೌಕರರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement