ಮಲಪ್ರಭಾ ಕಾಲುವೆಗೆ ನೀರು ಹರಿಸಿ: ಪ್ರತಿಭಟನೆ
ನವಲಗುಂದ: ಕಡಿಮೆ ಮಳೆಯಾಗಿದ್ದರಿಂದ ರೈತರು ಬಿತ್ತನೆ ಕಾರ್ಯ ಮಾಡಿದ್ದು ಇದರಿಂದ ಬೆಳೆ ಮೊಳಕೆಯೊಡೆದಿರುತ್ತವೆ. ಆದರೆ, ಇತ್ತೀಚಿಗೆ ಮಳೆಯಾಗದೆ ಬೆಳೆಗಳು ಒಣಗುತ್ತಿದ್ದು, ಮಲಪ್ರಭಾ ಬಲದಂಡೆ ಕಾಲುವೆಗೆ ಶೀಘ್ರವಾಗಿ ನೀರು ಹರಿಸಬೇಕೆಂದು ಒತ್ತಾಯಿಸಿ ನೀರು ಬಳಕೆದಾರರ ಸಂಘದಿಂದ ಮಂಗಳವಾರ ಮಧ್ಯಾಹ್ನ ರಸ್ತೆ ತಡೆದು ಪ್ರತಿಭಟನೆ ಮಾಡಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ನೂರಾರು ರೈತರು ಪ್ರತಿಭಟನೆ ಮಾಡಿ ಕಾಲುವೆಗೆ ನೀರು ಬಿಡಿಸುವಂತೆ ಶಾಸಕ ಎನ್.ಎಚ್. ಕೋನರಡ್ಡಿಗೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಸವರಾಜ ಹರಿವಾಳದ ನೇತೃತ್ವದಲ್ಲಿ ಘೇರಾವ್ ಹಾಕಿದರು. ಒಂದು ವೇಳೆ ನೀರನ್ನು ಬಿಡದಿದ್ದರೆ ಕಾಲುವೆ ಗೇಟ್ನ್ನು ನಾವೇ ತೆಗೆದು ಖುದ್ದಾಗಿ ನೀರನ್ನು ಬಿಟ್ಟುಕೊಳ್ಳುವುದಾಗಿ ಎಚ್ಚರಿಸಿದರು.