ಗ್ರೌಂಡ್ ಬಚಾವೋ ಹೋರಾಟಕ್ಕೆ ಬೆಂಬಲ
ಧಾರವಾಡ: ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ರಿಕ್ರಿಯೇಶನ್ ಕ್ಲಬ್ ನಿರ್ಮಾಣಕ್ಕೆ ವಿರೋಧಿಸಿ ಗ್ರೌಂಡ್ ಬಚಾವೋ ಸಮಿತಿಯಿಂದ ನಡೆಯುತ್ತಿರುವ ಹೋರಾಟಕ್ಕೆ ಎಐಡಿಎಸ್ಓ ಮತ್ತು ಎಐಡಿವೈಓ ಜಿಲ್ಲಾ ಸಮಿತಿಗಳು ಬೆಂಬಲ ವ್ಯಕ್ತಪಡಿಸಿವೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘಟನೆಯ ರಮೇಶ ಹೊಸಮನಿ, 1915ರಲ್ಲಿ ಬ್ರಿಟೀಷರ ಕಾಲದಿಂದಲೂ ದೇಶಪಾಂಡೆ ನಗರದಲ್ಲಿ ಕ್ರೀಡೆಗಾಗಿ ಮೈದಾನವನ್ನು ಕಾಯ್ದಿರಿಸಲಾಗಿತ್ತು. ಈ ಮೈದಾನ ನಾಗರಿಕರಿಗೆ ಬೆಳಗೆ,್ಗ ಸಾಯಂಕಾಲ ವಾಯು ವಿಹಾರಕ್ಕೆ ಅನುಕೂಲ. ಈ ಮೈದಾನದಲ್ಲಿ ಹಲವಾರು ಕ್ರೀಡಾ ಸಂಸ್ಥೆಗಳು, ವಿದ್ಯಾರ್ಥಿಗಳು, ಯುವಜನರು ಪ್ರತಿದಿನ ಅಭ್ಯಾಸದಲ್ಲಿ ನಿರತರಾಗಿರುತ್ತಿದ್ದರು. ಇಂತಹ ಮೈದಾನ ವೈಯಕ್ತಿಕ ಹಿತಾಸಕ್ತಿಗಾಗಿ ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಮೋಜು-ಮಸ್ತಿ ಮಾಡಲು ಹೊರಟಿರುವುದು ಖಂಡನೀಯ ಎಂದಿದ್ದಾರೆ.