'ದಿಯಾ' ಕಾರ್ಯಕ್ರಮಕ್ಕೆ ಚಾಲನೆ
ಹುಬ್ಬಳ್ಳಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿದ್ಯಾನಗರದ ಕ್ಯಾಡ್ ಸೆಂಟರ್‌ನಿಂದ 'ದಿಯಾ' ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಡ ಮಕ್ಕಳ ಕಲಿಕೆಗೆ ಅನುಕೂಲವಾಗುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆ. 21ರ ವರೆಗೂ ಮುಂದುವರೆಯಲಿದೆ. ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವ ಕಲಿಕಾ ಸಾಮಗ್ರಿಗಳಾದ ಕಂಪಾಸ್, ಡ್ರಾಫ್ಟರ್, ಕ್ಯಾಲ್ಕುಲೇಟರ್, ಹಳೇ ಪುಸ್ತಕಗಳು ಹಾಗೂ ಮತ್ತಿತರ ಸಾಮಗ್ರಿಗಳನ್ನು ಸಂಗ್ರಹಿಸಲಾಗುತ್ತಿದೆ.
ಸಂಸ್ಥೆಯ ಮುಖ್ಯಸ್ಥ ಪ್ರಮೋದ್ ಕುರಹಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಕೀರ್ತಿ ಮುನೋಳ್ಳಿ, ರಾಜಲಕ್ಷ್ಮೀ ಉಡಪುಡಿ, ಗಂಗಾ ಗಡಗಿ, ಸುಚಿತ್ರಾ ಕವಿಶೆಟ್ಟಿ ಮತ್ತಿತರರು ಹಾಜರಿದ್ದರು. ಆಸಕ್ತರು ಮಾಹಿತಿಗೆ ದೂಸಂ 0836 237462 ಅಥವಾ ಮೊ: 97318 15522 ಸಂಪರ್ಕಿಸಲು ಕೋರಲಾಗಿದೆ.