ನೂತನ ಆಟೋ ನಿಲ್ದಾಣ ಉದ್ಘಾಟನೆ
ಹುಬ್ಬಳ್ಳಿ: ಇಲ್ಲಿಯ ಅಕ್ಷಯ ಕಾಲೋನಿಯಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ನೂತನ ಆಟೋ ನಿಲ್ದಾಣ ಉದ್ಘಾಟನೆಗೊಂಡಿತು.
ಹುಬ್ಬಳ್ಳಿ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಹಾಗೂ ಉತ್ತರ ಪೊಲೀಸ್ ಠಾಣೆ ಇನಸ್ಪೆಕ್ಟರ್ ಶಿರಕೋಳ ನಿಲ್ದಾಣ ಉದ್ಘಾಟಿಸಿದರು.
ಡಿ.ಪಿ. ಸೇಜವಾಡಕರ, ಕಾಲೋನಿ ಅಧ್ಯಕ್ಷ ಮಗ್ದುಮ್, ಅಶೋಕ ಸೋಮಾಪೂರ, ಮುಸ್ತಾಕ ಕರ್ಜಗಿ, ಚಿದಾನಂದ ಸವದತ್ತಿ ಅತಿಥಿಗಳಾಗಿದ್ದರು. ಲಿಂ. ಮಾತೋಶ್ರೀ ಕಲ್ಲಮ್ಮ ಮೂಕಶಿವಯ್ಯನವರ ಮತ್ತು ಲಿಂ. ಸಂಗಯ್ಯ ಮೂಕಶಿವಯ್ಯಲವರ ಸ್ಮರಣಾರ್ಥ ಇದೇ ಸಂದರ್ಭದಲ್ಲಿ ಮಕ್ಕಳಿಗೆ ನೋಟಬುಕ್ ವಿತರಿಸಲಾಯಿತು.
ನೂತನ ನಿಲ್ದಾಣದ ಆಟೋ ಚಾಲಕರಾದ ಶಬ್ಬೀರ ಬಾಗೇವಾಡಿ, ಪವನ ಸಿಂಗ್, ಮಂಜುನಾಥ ಪಾಟೀಲ, ಮಂಜುನಾಥ ಮಿಶ್ರಿಕೋಟಿ, ಪ್ರಭು ಬಡಿಗೇರ, ಶಾಬುದ್ದೀನ ಧಾರವಾಡಕರ, ಹುಸೇನಸಾಬ ಹರಿಹರ, ಕಾಲೋನಿ ನಿವಾಸಿಗಳು ಹಾಜರಿದ್ದರು. ಪುಂಡಲೀಕ ಬಡಿಗೇರ ನಿರೂಪಿಸಿದರು.