ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಧಿಮಾನಸ ಪ್ರಜ್ಞೆ ಸಾಕ್ಷಾತ್ಕಾರ ಮಾಡಿಕೊಂಡ ಅರವಿಂದರು

Lingaraj Badiger
Updated On : 19 Aug 2013, 11:47 am

ಧಾರವಾಡ: ತಮ್ಮ ತಪೋಬಲದಿಂದ ಅಧಿಮಾನಸ ಪ್ರಜ್ಞೆಯ ಸಾಕ್ಷಾತ್ಕಾರ ಮಾಡಿಕೊಂಡ ಮಹರ್ಷಿ ಅರವಿಂದರು ಮನೋವೈಜ್ಞಾನಿಕ ದರ್ಶನವನ್ನು ಪ್ರಕಟಿಸುವ ಮೂಲಕ ಮಾನವಲೋಕದ ಉತ್ಕ್ರಾಂತಿಯ ಸಾಧ್ಯತೆಯನ್ನು ನಿರೂಪಿಸಿದರು ಎಂದು ಸಾಹಿತಿ ಡಾ.ಕೆ.ಎಸ್. ಆಮೂರ ಹೇಳಿದರು.
ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಏರ್ಪಡಿಸಿದ್ದ ಮಹರ್ಷಿ ಅರವಿಂದರ 142ನೇ ವರ್ಧಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವ-ಭೌತಿಕ ಕ್ಷೇತ್ರಗಳಲ್ಲಿ ಉಂಟಾದ ವೈಜ್ಞಾನಿಕ ಪ್ರಗತಿ, ತಾಂತ್ರಿಕ ಕ್ರಾಂತಿಗಳ ಹಿಂದಿನ ಶಕ್ತಿ ಯಾವುದೆಂದು ಸಮರ್ಥವಾಗಿ ಕಂಡುಕೊಂಡರಲ್ಲದೇ, ಜಗತ್ತಿನ ಆಸ್ತಿಕರಿಗೆ ಮನದಟ್ಟಾಗುವಂತೆ ಪ್ರಕಟಿಸಿದ್ದಾರೆ. ಅರವಿಂದರ ಸಿದ್ಧಿಯನ್ನು ಕಂಡುಕೊಂಡ ಬೇಂದ್ರೆಯವರಿಗೆ ಅಧಿಮಾನಸ ಪ್ರಜ್ಞೆ ಸಿದ್ಧಿಸಿತ್ತು. ಸಹಸ್ರ ತಂತಿ ನಿಸ್ವನದಂತೆ ಎಂಬ ಕವಿತೆಯೇ ಈ ಮಾತಿಗೆ ಸಾಕ್ಷಿ ಎಂದು ಆಮೂರ ಅಭಿಪ್ರಾಯಿಸಿದರು.
ಅರವಿಂದ ಅಭ್ಯಾಸ ಮಂಡಳಿ ಸಾಧಕ ಮುತಾಲಿಕ ದೇಸಾಯಿ, ಉಷಾ ಹಾನಗಲ್, ರಾಧಾ ಆಮೂರ ಮತ್ತು ಹರೀಶ ಆಮೂರ ಅವರಿಂದ ಪ್ರಾರ್ಥನೆ, ಧ್ಯಾನ ನಡೆದವು. ನಂತರ ಜರುಗಿದ ಮಾಸಿಕ ಭಾವಗೀತ ಗಾಯನ ಕಾರ್ಯಕ್ರಮದಲ್ಲಿ ಯುವಗಾಯಕ ವಿಶಾಲ ಹೆಗಡೆ ಅರವಿಂದರ ಕುರಿತು ಬೇಂದ್ರೆಯವರು ರಚಿಸಿದ ಹಾಗೂ ಬೇಂದ್ರೆಯವರ ಇನ್ನಿತರ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು.
ಹಾರ್ಮೋನಿಯಂನಲ್ಲಿ ಶ್ರೀಪಾದ ಹೆಗಡೆ, ತಬಲಾದಲ್ಲಿ ಗಜಾನನ ಹೆಗಡೆ ಮತ್ತು ತಂಬೂರಿಯಲ್ಲಿ ಹರೀಶ ಹೆಗಡೆ ಸಾಥ್ ನೀಡಿದರು. ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಸ್ವಾಗತಿಸಿದರು. ಸದಸ್ಯ ನರಸಿಂಹ ಪರಾಂಜಪೆ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement