ಮಕ್ಕಳನ್ನು ಸುಧಾರಿಸುವುದು ನಮ್ಮೆಲ್ಲರ ಕರ್ತವ್ಯ
ಕುಂದಗೋಳ: ವಿದ್ಯಾರ್ಥಿಗಳನ್ನು ಚಟ ಮುಕ್ತರನ್ನಾಗಿಸಲು ನಾವೆಲ್ಲ ಸೇರಿ ಶ್ರಮಿಸಬೇಕಾಗಿದೆ. ಈ ಶ್ರಮದಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿದ್ದು, ಮಕ್ಕಳನ್ನು ಹಿಂಬಾಲಿಸಿ ಅವರ ನಡೆ ನುಡಿಗಳ ಬಗ್ಗೆ ಗಮನಿಸಬೇಕು ಎಂದು ಪ್ರೊ. ಸಿ.ವಿ. ಹುಬ್ಬಳ್ಳಿ ಹೇಳಿದರು.
ತಾಲೂಕಿನ ಸಂಶಿ ಗ್ರಾಮದ ಕೆಎಲ್ಇ ಸಂಸ್ಥೆಯ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡ ಪಾಲಕರ ಸಭೆಯಲ್ಲಿ ಮಾತನಾಡುತ್ತ, ಇಂದಿನ ನಮ್ಮ ಯುವ ವಿದ್ಯಾರ್ಥಿಗಳೆ ದೇಶದ ಸಂಪತ್ತು. ಹಾಗಾಗಿ ಅವರನ್ನು ದುಶ್ಚಟಗಳಿಂದ ದೂರಮಾಡಿ, ಓದಿನತ್ತ ಹೆಚ್ಚಿನ ಗಮನ ಕೊಡಲು ನಮ್ಮೊಂದಿಗೆ ಪಾಲಕರೆಲ್ಲ ಸೇರಿ ಅವರತ್ತ ನಿಗಾವಹಿಸಿ ಅವರನ್ನು ಚಟ ಮುಕ್ತರನ್ನಾಗಿಸಿಕೊಳ್ಳೋಣ ಎಂದರು.
ಸಭೆಯಲ್ಲಿ ಪಾಲಕರಾದ ಎಸ್.ಸಿ. ಹತ್ತಿ ಮಾತನಾಡಿ, ಈ ಸಂಸ್ಥೆಯಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಸಾವಿರ ರು. ಕೊಡುವುದಾಗಿ ವಾಗ್ದಾನ ಮಾಡಿ ಕಾಲೇಜಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರೊ. ರಮೇಶ ಅತ್ತಿಗೇರಿ ಸ್ವಾಗತಿಸಿ, ನಿರೂಪಿಸಿದರು. ಎ.ವಿ. ಕಿನ್ನಾಳ ವಂದಿಸಿದರು.