ರಾಜೀವ್ ಗಾಂಧಿ, ಅರಸು ಜಯಂತಿ
ಧಾರವಾಡ: ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ, ಮಾಜಿ ಸಿಎಂ ದೇವರಾಜ ಅರಸು ಜಯಂತಿಯನ್ನು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಆಚರಿಸಲಾಯಿತು. ಮಾಜಿ ಸಚಿವ, ಜಿಲ್ಲಾಧ್ಯಕ್ಷ ಎ.ಎಂ. ಹಿಂಡಸಗೇರಿ, ಶಾಸಕ ಸಿ.ಎಸ್. ಶಿವಳ್ಳಿ, ಬುರಾನ ಗೌಳಿ, ಆನಂದ ಜಾಧವ, ಆನಂದ ಮುಶಣ್ಣವರ, ಆನಂದ ಸಿಂಗನಾಥ, ಆನಂದ ಅದ್ವಾನಿ, ಕೇಶವ ಯಾಧವ, ಪಾಲಿಕೆ ಸದಸ್ಯರಾದ ರಘುನಾಥ ಲಕ್ಕಣ್ಣವರ, ಸುಭಾಷ ಶಿಂದೆ, ಮೋಹನ ಹಿರೇಮನಿ, ಯಾಸೀನ ಹಾವೇರಿಪೇಟ, ಶ್ರೀಧರ ಶೇಟ, ಮುಲ್ಲಾ ಮಿಶ್ರಿಕೋಟಿ, ವಸಂತ ಅರ್ಕಾಚಾರ, ಬಾಬು ಗೌಳಿ, ವೆಂಕಟೇಶ ರಾಯಕರ, ಮೋಹನ ಕಲಾಲ, ಮಹೇಶ ದಾಬಡೆ ಇದ್ದರು.
ಪಾಲಿಕೆಯಲ್ಲಿ ಸದ್ಭಾವನಾ ದಿನ
ಹುಬ್ಬಳ್ಳಿ: ಮಾಜಿ ಪ್ರಧಾನಿ ದಿ. ರಾಜೀವ್‌ಗಾಂಧಿ ಜನ್ಮ ದಿನಾಚರಣೆ ಅಂಗವಾಗಿ ಮಹಾನಗರ ಪಾಲಿಕೆ ಮುಖ್ಯ ಕಚೇರಿಯಲ್ಲಿ ಮಂಗಳವಾರ ಸದ್ಭಾವನಾ ದಿನ ಆಚರಿಸಲಾಯಿತು. ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಸದ್ಭಾವನಾ ದಿನಾಚರಣೆಯ ಪ್ರತಿಜ್ಞಾ ವಿಧ್ನಿ ಬೋಧಿಸಿದರು. ವೈಯಕ್ತಿಕ, ಸಾಮೂಹಿಕವಾಗಿಯಾಗಲಿ ಎಲ್ಲ ಭೇದ-ಭಾವ, ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ, ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುವುದಾಗಿ ಸಿಬ್ಬಂದಿ ಪ್ರತಿಜ್ಞೆ ಮಾಡಿದರು.