ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರೇಲ್ವೆ ದುರಂತಕ್ಕೆ ಪ್ರತಿದಿನ 40 ಜೀವ ಬಲಿ: ಪ್ರಹ್ಲಾದ ಜೋಶಿ

Mainashree
Updated On : 21 Aug 2013, 11:22 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 20
ಪ್ರತಿದಿನ ಏನಿಲ್ಲವೆಂದರೂ ಸರಾಸರಿ 40 ಜನರು ರೇಲ್ವೆ ದುರಂತಕ್ಕೆ ಬಲಿಯಾಗುತ್ತಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಬಿಹಾರ್‌ನ ದಮಾರ್ ಘಾಟ್ ಹತ್ತಿರ ರೈಲು ಹಾಯ್ದ ಪರಿಣಾಮ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಕ್ಕೆ ಅವರು ಸಂತಾಪ ವ್ಯಕ್ತಪಡಿಸಿ, ಜನವರಿ 2009ರಿಂದ ಜೂನ್ 2012ರ ವರೆಗೆ ರೈಲು ಕ್ರಾಸಿಂಗ್ ಅಪಘಾತಗಳು ಸೇರಿದಂತೆ 50,293 ಜನರು ರೈಲ್ವೆ ದುರಂತಕ್ಕೆ ಬಲಿಯಾಗಿದ್ದಾರೆ ಎಂದು ರೇಲ್ವೆ ಇಲಾಖೆ ಮಾಹಿತಿ ನೀಡಿದ್ದು, ಪ್ರತಿವರ್ಷ 14,369 ಜನರು ರೈಲು ದುರಂತದಲ್ಲಿ ಮರಣ ಹೊಂದುತ್ತಿದ್ದಾರೆ. ಪ್ರತಿತಿಂಗಳು 1,197 ಜನರ ಜೀವವನ್ನು ರೇಲ್ವೆ ಇಲಾಖೆ ಬಲಿ ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ.
ರೇಲ್ವೆ ದುರಂತಗಳನ್ನು ತಡೆಯುವಲ್ಲಿ ಕೇಂದ್ರದ ಯುಪಿಎ ಸರ್ಕಾರ ವಿಫಲವಾಗಿದೆ. ಪದೇ ಪದೇ ರೇಲ್ವೆ ದುರಂತಗಳು ಸಂಭವಿಸುತ್ತಿದ್ದರೂ ಮನಮೋಹನ ಸಿಂಗ್ ನೇತೃತ್ವದ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಪಘಾತದ ನಂತರ ಕಾರಣ ಹುಡುಕುವ ಸಮಿತಿಗಳನ್ನು ರಚಿಸುವ ಮೂಲಕ ಸರ್ಕಾರ ಕೈ ತೊಳೆದುಕೊಳ್ಳುತ್ತಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭಾರತೀಯ ರೇಲ್ವೆಯನ್ನ್ನು ತಮ್ಮ ಹಾಗೂ ತಮ್ಮ ಅಂಗ ಪಕ್ಷಗಳ ಅತೃಪ್ತರನ್ನ್ನು ತೃಪ್ತಿಗೊಳಿಸಲು ಅಥವಾ ತಮ್ಮ ರಾಜಕೀಯ ಹಿತಾಸಕ್ತಿ ಕಾಪಾಡಲು ದಾಳವಾಗಿ ಬಳಸಿಕೊಳ್ಳುತ್ತಿದೆ.  ಇದೇ ಕಾರಣಕ್ಕೆ ಭಾರತೀಯ ರೇಲ್ವೆಗೆ ಕಾಯಕಲ್ಪ ನೀಡಿ ದಿಕ್ಕು ದೆಸೆ ತೋರಿಸುವ ಒಬ್ಬ ಉತ್ತಮ ಹಾಗೂ ಸಮರ್ಥ ರೇಲ್ವೆ ಸಚಿವರನ್ನು ಕಾಂಗ್ರೆಸ್‌ಗ್ನೆ ನೀಡಲು ಸಾಧ್ಯವಾಗಿಲ್ಲವೆಂದು ಸಂಸದ ಜೋಶಿ ಟೀಕಿಸಿದ್ದಾರೆ.  
ರೇಲ್ವೆ ಸಚಿವ  ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯಲ್ಲಿ ಅಪಘಾತದ ತಾಂತ್ರಿಕ ವಿವರ ವಿನಃ ರೇಲ್ವೆಯನ್ನ್ನು ಅಪಘಾತ ಮುಕ್ತವನ್ನಾಗಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ಇಲ್ಲ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement