ನವಲಗುಂದ: ಶೇ. 99.23 ಮತದಾನ
ನವಲಗುಂದ: ವಿಧಾನಪರಿಷತ್ ಉಪಚುನಾವಣೆಗೆ ಇಲ್ಲಿನ 24 ತಾಪಂ ಬೂತಮಟ್ಟದಲ್ಲಿ ನಡೆದ ಮತದಾನದ ವೇಳೆ ಶೇ. 99.23 ಮತದಾರರು ಗುರುವಾರ ಶಾಂತಿಯುತವಾಗಿ ಮತದಾನ ಮಾಡಿದರು. ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರಗೆ ಎಲ್ಲೂ ಅಹಿತಕರ ಘಟನೆ ಜರುಗಿಲ್ಲ.ಒಟ್ಟು 389 ಜನರುಮತದಾರರು ಹಕ್ಕು ಚಲಾಯಿಸಿದ್ದಾರೆ.
ಚುನಾವಣಾಧಿಕಾರಿ, ತಹಸೀಲ್ದಾರ್ ಎಚ್.ಡಿ. ನಾಗಾವಿ 17 ಸೂಕ್ಷ್ಮ, 7 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಿ ಒಟ್ಟು 120 ಸಿಬ್ಬಂದಿ ನೇಮಿಸಿದ್ದರು. ಪೊಲೀಸ್ ಬೀಗಿ ಬಂದೂಬಸ್ತ್ ಒದಗಿಸಿ, ಶಾಂತಿಯುತ ಮತದಾನಕ್ಕೆ ಅನುವು ಮಾಡಿಕೊಡಲಾಯಿತು. ಮೂವರು ಸದಸ್ಯೆಯರು ಗೈರು ಹಾಜರಿಯಿಂದ 3 ಮತದಾನ ಮಾತ್ರ ಕಡಿಮೆಯಾಗಿದೆ.