ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೀಲಾಂಬಿಕೆ ಆದರ್ಶ ಸಾಧ್ವಿ

Lingaraj Badiger
Updated On : 23 Aug 2013, 12:31 pm

ಅಣ್ಣಿಗೇರಿ: ವಿಶ್ವಗುರು ಬಸವಣ್ಣನ ವಿಚಾರ ಪತ್ನಿಯಾದ ನಿಲಾಂಬಿಕೆ ಹೆಂಡತಿಗೆ ಗಂಡನೇ ಸಕಲ ಸರ್ವಸ್ವವೆಂಬ ಮಾತನ್ನು ಬಲವಾಗಿ ನಂಬಿ ನಡೆದ ಸತಿಯವಳು. ಕೂಡಲಸಂಗಮಕ್ಕೆ ಅಂತಿಮ ದಿನಗಳಲ್ಲಿ ಬಸವಣ್ಣನವರು ಬರ ಹೇಳಿದಾಗ ಪರಿಣಾಮ ಮೂರ್ತಿ ಬಸವಯ್ಯನ ರೂಪು ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೇತಕಯ್ಯ ಬಸವಾ. ಅಲ್ಲಿರುವ ಸಂಗಯ್ಯ ಇಲ್ಲಲ್ಲಿವೇ ಎನ್ನ ಬಸವನು ನನ್ನ ಕರಸ್ಥಲದ ಲಿಂಗದಲ್ಲಿಲ್ಲವೆ ಎನ್ನುವ ಮೂಲಕ ದೇವರು ನಮ್ಮೊಡನಿದ್ದಾನೆ ಎಂದು ಹೇಳಿದ ನಿಲಾಂಬಿಕೆ ಆದರ್ಶ ಸಾಧ್ವಿಯಾಗಿದ್ದಳು ಎಂದು ಶಿಕ್ಷಕ ದ್ಯಾಮಣ್ಣ ಕಬ್ಬೂರ ಹೇಳಿದರು.
ಪಟ್ಟಣದ ವೇದಾವತಿ ಕಟ್ಟಿ ಆದಿಕವಿ ಪಂಪ ನಗರದ ಅವರ ನಿವಾಸದಲ್ಲಿ ಜರುಗಿದ ಶರಣ ಶ್ರಾವಣ ಮಾಲಿಕೆಯಲ್ಲಿ ನಿಲಾಂಬಿಕೆ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕಿ ಡಾ೤ ಸುಧಾ ಎಸ್. ಕೌಜಗೇರಿ ಮಾತನಾಡಿದರು. ರೇಣುಕಾ ಡಬರಿ ಅತಿಥಿಯಾಗಿ ಪಾಲ್ಗೊಂಡಿದ್ದರು. ನಾಗರತ್ನಾ ಹಳ್ಳೂರ ಪ್ರಾರ್ಥನೆ ಗೀತೆ ಹಾಡಿದರು. ಸವಿತಾ ಡಬರಿ ಸ್ವಾಗತಿಸಿದರು. ಪ್ರೊ೤ ಎಸ್.ಎಸ್. ಹರ್ಲಾಪುರ ಪ್ರಾಸ್ತಾವಿಕ ಮಾತನಾಡಿದರು. ಫರೀದಾ ತಹಸೀಲ್ದಾರ್ ವಂದಿಸಿದರು. ರೂಪಾ ಬಳ್ಳೊಳ್ಳಿ ನಿರೂಪಿಸಿದರು. ಡಾ೤ ಗೀತಾ ಹರ್ಲಾಪುರ ಮಂಗಲಗೀತೆ ಹಾಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement