ಯಶಸ್ವಿಯಾದ ರಾಯರ ಆರಾಧನೆ
ಧಾರವಾಡ: ಇಲ್ಲಿನ ಶಂಕರಿ ಲೇಔಟ್‌ನ ಮಂತ್ರಾಲಯ ಶಾಖಾಮಠದ ಪುರಂದರ ಮಂಟಪದಲ್ಲಿ ರಾಯರ ಪ್ರಥಮ ಆರಾಧನಾ ಮಹೋತ್ಸವ ಯಶಸ್ವಿಯಾಗಿ ಜರುಗಿತು.
ಮಹೋತ್ಸವದಲ್ಲಿ ಅಷ್ಟೋತ್ತರ, ಪಂಚಾಮೃತ, ರಾಯರಿಗೆ ಅಲಂಕಾರ, ತೀರ್ಥ, ಪ್ರಸಾದ ವಿತರಣೆ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು. ಇದೇ ಸಂದರ್ಭದಲ್ಲಿ ಪಂ. ಗೋವಿಂದ ನವಲಗುಂದ ಅವರು ರಾಘವೇಂದ್ರ ಸ್ವಾಮಿಗಳ ಮಹಿಮೆ ಕುರಿತು ಪ್ರವಚನ ನೀಡಿದರು. ನಂತರ ದೀಪಾ ಕಟ್ಟಿ ಸಂಗೀತ ಪ್ರಸ್ತುತ ಪಡಿಸಿದರು. ಗಜಾನನ ಹೆಗಡೆ ತಬಲಾ ಮತ್ತು ರಮೇಶ ಜೋಶಿ ಹಾರ್ಮೋನಿಯಂ ಸಾಥ್ ನೀಡಿದರು. ಹಯವದನ, ಹಲಗಣೇಶ ಮತ್ತು ಮಧ್ವಕೃಷ್ಣ ಮಂಡಳಿಗಳಿಂದ ಭಜನೆ ಜರುಗಿತು. ಅಚ್ಯುತರಾವ್ ಬಿಡಕರ, ಎಸ್.ಜಿ. ಖಾಸನೀಸ, ಎಸ್.ಬಿ. ದ್ವಾರಪಾಲಕ, ಸುರೇಶ ಅಷ್ಟಪುತ್ರೆ, ವಿ.ಬಿ. ನಾಗನೂರ, ಎಂ.ಆರ್. ದೇಸಾಯಿ, ಎಸ್.ಎಂ. ಜೋಶಿ, ವಿ.ಕೆ. ಕಟ್ಟಿ, ಜಯತೀರ್ಥಾಚಾರ್ಯ ಹಂಪಿಹೊಳಿ, ಕೃಷ್ಣಾಚಾರ್ಯ ಕಡಗದಕೈ, ಶೇಷಗಿರಿ ಜೋಶಿ, ಗುರುರಾಜ ನಾಡಗೌಡ, ವಿಜಯ ವಿಠ್ಠಲಾಚಾರ್ಯ, ಡಾ. ವಿಜಯವಿಠ್ಠಲ ಮನಗೂಳಿ, ಸಿ. ನಾಗರಾಜ, ಕನಕಗಿರಿ ಇದ್ದರು.