ಸಿದ್ಧಾರೂಢರ ಅದ್ಧೂರಿ ಜಲರಥೋತ್ಸವ
ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರ ಸಿದ್ಧಾರೂಢ ಮಠದಲ್ಲಿ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜಲರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಪ್ರತಿವರ್ಷ ಶ್ರಾವಣ ಬಿದಿಗೆಯಂದು ನಡೆಯುವ ಜಲರಥೋತ್ಸವಕ್ಕೆ ಮಹಾರಾಷ್ಟ್ರ ಮತ್ತು ಗೋವಾದಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಜಿಲ್ಲಾ ಸತ್ರ ನ್ಯಾಯಾಧೀಶ ಮತ್ತು ಸಿದ್ಧಾರೂಢ ಟ್ರಸ್ಟ್ ಅಧ್ಯಕ್ಷ ನ್ಯಾಯಾಧೀಶ ನಟರಾಜನ್ ಅವರು ಜಲರಥೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ನಾರಾಯಣಪ್ರಸಾದ್ ಪಾಠಕ್, ಉಪಾಧ್ಯಕ್ಷೆ ಜ್ಯೋತಿ ಸಾಲಿಮಠ, ಗೌರವ ಕಾರ್ಯದರ್ಶಿ ಪಿ.ಎಸ್. ಪಾಟೀಲ, ಧರ್ಮದರ್ಶಿಗಳಾದ ಯಲ್ಲಪ್ಪ ದೊಡಮನಿ, ಮಹೇಂದ್ರ ಸಿಂಘಿ, ನಾರಾಯಣಸಾ ಮೆಹರವಾಡೆ ಇನ್ನಿತರರು ಇದ್ದರು.