ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದಿನಿಂದ ತರಬೇತಿ ಸ್ಪರ್ಧೆ

Lingaraj Badiger
Updated On : 24 Aug 2013, 12:16 pm

ಧಾರವಾಡ: ಪ್ರಸಕ್ತ ಸಾಲಿನ ಫಲಪುಷ್ಪ ಪ್ರದರ್ಶನದ ಅಂಗವಾಗಿ ಅವಳಿನಗರಗಳಲ್ಲಿ ಸೆ. 24ರಿಂದ 26ರ ವರೆಗೆ ಉದ್ಯಾನ ಸ್ಪರ್ಧೆ ಏರ್ಪಡಿಸಲಾಗಿದೆ. ತೋಟಗಾರಿಕೆ ಕುರಿತು ಚಿಕ್ಕಮಲ್ಲಿಗವಾಡದ ಪಿ.ವಿ. ಹಿರೇಮಠ ಅವರ ನರ್ಸರಿಯಲ್ಲಿ, ತಾರಸಿ ತೋಟ ಕುರಿತು ಸೆ. 17ರಂದು ಹುಬ್ಬಳ್ಳಿ ಗಣೇಶ ನಗರದ ಎ.ಜಿ. ದೇಶಪಾಂಡೆ ಅವರ ಮನೆಯ ಮೇಲೆ ತರಬೇತಿಗಳು ನಡೆಯಲಿವೆ. ಧಾರವಾಡದ ಆರ್ಟ್ ಗ್ಯಾಲರಿಯಲ್ಲಿ ಸೆ. 18ರಂದು ಪ್ರೌಢ ಶಾಲಾಮಕ್ಕಳಿಗೆ ಚಿತ್ರಕಲೆ ಹಾಗೂ 19ರಂದು 10ನೇ ತರಗತಿ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ 0836-2447801ಗೆ ಸಂಪರ್ಕಿಸಲು ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ನಾಳೆ ಪ್ರತಿಭಾ ಪುರಸ್ಕಾರ
ಧಾರವಾಡ: ರಾಜ್ಯ ವೀರಶೈವ, ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ 2013ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬೆಳವಡಿ ಮಲ್ಲಮ್ಮಾಜಿಯ 353ನೇ ಜನ್ಮದಿನಾಚರಣೆ ಆ. 25ರಂದು ಮಧ್ಯಾಹ್ನ 3ಕ್ಕೆ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ. ಹರಿಹರದ ಪಂಚಮಸಾಲಿಯ ಸಿದ್ದಲಿಂಗ ಶ್ರೀ ಸಾನ್ನಿಧ್ಯ ವಹಿಸುತ್ತಾರೆ. ಸಂಘದ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರ ಸಮಾರಂಭ ಉದ್ಘಾಟಿಸುತ್ತಾರೆ. ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ ಗುಡ್ಡದ ಅಧ್ಯಕ್ಷತೆ ವಹಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಸನ್ಮಾನ ಸಮಾರಂಭ
ಹುಬ್ಬಳ್ಳಿ: ವಿಶ್ವ ಛಾಯಾಗ್ರಹಣ ದಿನದಂಗವಾಗಿ ಹಿರಿಯ ಛಾಯಾಗ್ರಾಹಕರಿಗೆ ಹುಬ್ಬಳ್ಳಿ ಫೋಟೋ, ವಿಡಿಯೋ ಗ್ರಾಫರ್ಸ್ ಸಂಘದ ವತಿಯಿಂದ ಆ. 24ರಂದು ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9.30ಕ್ಕೆ ದಾಜಿಬಾನಪೇಟದ ಸೀತಾಬಾಯಿ ಕುಬೇರಸಾ ಕಲ್ಯಾಣ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕರಾದ ಅರ್ಜುನಸಾ ಧೊಂಗಡಿ, ರಾಮಚಂದ್ರ ಹರ್ಷ ಅವರನ್ನು ಸನ್ಮಾನಿಸಲಾಗುವುದು. ಶಿರಸಿಯ ಉತ್ತರ ಕನ್ನಡ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್ ಅತಿಥಿಯಾಗಿದ್ದು, ಹುಬ್ಬಳ್ಳಿ ಫೋಟೋ-ವಿಡಿಯೋ ಗ್ರಾಫರ್ಸ್ ಸಂಘದ ಅಧ್ಯಕ್ಷ ಇಂದೂಧರ ಸಾಲಿ ಅಧ್ಯಕ್ಷತೆ ವಹಿಸುವರು. ನಗರದ ಛಾಯಾಗ್ರಾಹಕ ವಸಂತಕುಮಾರ ಉಪನ್ಯಾಸ ನೀಡುವರು.
ಗುಂಡೂರಾವ್ ಪುಣ್ಯಸ್ಮರಣೆ
ಹುಬ್ಬಳ್ಳಿ: ಮಾಜಿ ಸಿಎಂ ದಿ. ಆರ್. ಗುಂಡೂರಾವ್‌ರ 20ನೇ ಪುಣ್ಯಸ್ಮರಣೆಯನ್ನು ನಗರದ ಸ್ಟೇಶನ್ ರಸ್ತೆಯ ಪ್ರಕಾಶ ರೆಸ್ಟೋರೆಂಟ್ ಸಭಾಗೃಹದಲ್ಲಿ ಆ. 25ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ಆಹಾರ-ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ಎ.ಎಂ. ಹಿಂಡಸಗೇರಿ,  ಮಂಜುನಾಥ ಕುನ್ನೂರ, ರಂಜಾನ್ ದರ್ಗಾ ಅತಿಥಿಯಾಗಿದ್ದು, ಎಸ್.ಆರ್.  ಮೋರೆ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ಸರಜೂ ಕಾಟ್ಕರ್ ಅವರನ್ನು ಸನ್ಮಾನಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement