ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಂಪ್ಯೂಟರ್ ಡಿಪ್ಲೊಮಾ: ಸೀಟುಗಳು ಲಭ್ಯ

Lingaraj Badiger
Updated On : 24 Aug 2013, 12:08 pm

ಧಾರವಾಡ: ಕರ್ನಾಟಕ ವಿವಿಯ ಗಣಕಯಂತ್ರ ವಿಜ್ಞಾನ ವಿಭಾಗ ನಡೆಸುವ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಷನ್ ಡಿಪ್ಲೊಮಾ ಕೋರ್ಸ್‌ನ ಪ್ರಸಕ್ತ ಸಾಲಿನಲ್ಲಿ ಕೆಲವು ಸೀಟುಗಳು ಖಾಲಿ ಇದ್ದು, ಆಸಕ್ತರು ಆ. 28ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆ.31ರಂದು ಬೆಳಿಗ್ಗೆ 11ಕ್ಕೆ ಗಣಕಯಂತ್ರ ವಿಜ್ಞಾನ ವಿಭಾಗದಲ್ಲಿ ಕೌನ್ಸೆಲಿಂಗ್ ಮೂಲಕ ಸೀಟು ಹಂಚಲಾಗುವುದು. ಈ ಕೋರ್ಸ್‌ಗೆ ಯಾವುದೇ ಪದವಿ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಪ್ರಸ್ತುತ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಈ ಕೋರ್ಸ್ ಮಾಡಬಹುದು.
ಖಾಲಿ ಸೀಟುಗಳ ವಿವರ: ಕವಿವಿ ಕ್ಯಾಂಪಸ್ 53, ಜೆಎಸ್ಸೆಸ್ ಕಾಲೇಜು 20, ಅಂಜುಮನ್ ಕಾಲೇಜು 15, ಹುಬ್ಬಳ್ಳಿಯ ಡಾ.ಕೆ.ಎಸ್. ಶರ್ಮಾ ಕಾಲೇಜು 15, ಭಟ್ಕಳದ ಅಂಜುಮನ್ ಕಾಲೇಜು 15, ಗದಗನ ಬಸವೇಶ್ವರ ಕಾಲೇಜು 50 ಹಾಗೂ ಹಾವೇರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ 40 ಸೀಟುಗಳು ಲಭ್ಯವಿವೆ. ಈ ಕೋರ್ಸ್‌ಗೆ ಯಾವುದೇ ಪ್ರವೇಶ ಪರೀಕ್ಷೆ ಇರುವುದಿಲ್ಲ. ಮೆರಿಟ್ ಮತ್ತು ರೋಸ್ಟರ್ ಆಧಾರದಲ್ಲಿ ಸೀಟುಗಳನ್ನು ಹಂಚಲಾಗುವುದು. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ (0836-2215343) ಸಂಪರ್ಕಿಸಲು ವಿಭಾಗದ ಮುಖ್ಯಸ್ಥ ಡಾ.ಈಶ್ವರ ಬೈದಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement