ಕಟ್ಟಿಮನಿ ಶಾಲೆಗೆ ಸಮಗ್ರ ವೀರಾಗ್ರಣಿ
ಹುಬ್ಬಳ್ಳಿ: ನಗರದ ವಲಯದ ಹೊಸೂರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಕೆಎಲ್ಇ ಶಿಕ್ಷಣ ಸಂಸ್ಥೆಯ ಕೆಎಲ್ಇ ಸಂಸ್ಥೆಯ ಎಚ್.ಎಫ್. ಕಟ್ಟಿಮನಿ ಶಾಲೆಯ ವಿದ್ಯಾರ್ಥಿಗಳ ತಂಡ ಸಮಗ್ರ ವೀರಾಗ್ರಣಿ ತನ್ನದಾಗಿಸಿಕೊಂಡಿದೆ.
100, 200 ಮೀಟರ್ ಓಟದಲ್ಲಿ ಪ್ರಥಮ, ಎತ್ತರ ಜಿಗಿತ ದ್ವಿತೀಯ ಸ್ಥಾನ ಪಡೆದಿರುವ ಶಿವಪ್ರಸಾದ ಸವಣೂರ ಬಾಲಕರ ವೈಯಕ್ತಿಕ ವಿಭಾಗದಲ್ಲಿ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾನೆ. ಎಚ್.ಎಫ್. ಕಟ್ಟಿಮನಿ ಶಾಲೆಯ ವಿದ್ಯಾರ್ಥಿ ಪರಸನಗೌಡ ಶಿವನಗೌಡ 600 ಮೀಟರ್, (ದ್ವಿತೀಯ), ಮೃತ್ಯುಂಜಯ ಬಂದಣ್ಣವರ, ಉದ್ದ ಜಿಗಿತ (ದ್ವಿತೀಯ) ಸ್ಥಾನ ಪಡೆದಿದ್ದಾನೆ.
--