ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುದ್ದಿ ಸಂಕ್ಷೇಪ

Mainashree
Updated On : 25 Aug 2013, 12:35 pm

ಇಂದು ಉಚಿತ ನೇತ್ರತಪಾಸಣಾ ಶಿಬಿರ
ಧಾರವಾಡ: ವಾಸನ್ ಐ ಕೇರ್ ವತಿಯಿಂದ ಇಲ್ಲಿನ ಮದಿಹಾಳದ ಗಾಯಕವಾಡ ಕಲ್ಯಾಣ ಮಂಟಪದಲ್ಲಿ ಆ. 25ರಂದು ಬೆಳಗ್ಗೆ 10ಕ್ಕೆ ಕಣ್ಣಿನ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಾಸಕ ವಿನಯ ಕುಲಕರ್ಣಿ ಉದ್ಘಾಟಿಸುವರು. ಬಸವಂತಪ್ಪ ಗಾಯಕವಾಡ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆಗಾಗಿ ಉಚಿತ ಕಾರ್ಯಾಗಾರ
ಧಾರವಾಡ: ಕರ್ನಾಟಕ ಕ್ಲಾಸಿಕ್ ಎಜ್ಯುಕೇಶನ್ ವತಿಯಿಂದ ಸಂಸ್ಥೆಯಲ್ಲಿ ಆ. 25ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಉಚಿತ ಐಐಎಸ್ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ಹಾಗೂ ಬ್ಯಾಂಕ್ ಪಿಒ ಪರೀಕ್ಷೆಯ ಕುರಿತು ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕ್ಲಾಸಿಕ್ ಸಂಸ್ಥೆ ವಿದ್ಯಾರ್ಥಿಗಳ ಅನಕೂಲಕ್ಕಾಗಿ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೇ, ಈ ಕಾರ್ಯಾಗಾರದಲ್ಲಿ 100 ಅಭ್ಯರ್ಥಿಗಳಿಗೆ ಮಾತ್ರ ಸೀಮಿತವಾಗಿದೆ. ಆಸಕ್ತರು ಮೊ. 9980552080 ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕ ಲಕ್ಷ್ಮಣ ಉಪ್ಪಾರ ತಿಳಿಸಿದ್ದಾರೆ.
ನೇತ್ರ ತಪಾಸಣಾ ಶಿಬಿರ
ಧಾರವಾಡ: ಕಾಮಧೇನು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ದಿವ್ಯ ಜ್ಯೋತಿ ಕಣ್ಣಿನ ಆಸ್ಪತ್ರೆ ಜಂಟಿಯಾಗಿ ಸಮೀಪದ ಗೋಪನಕೊಪ್ಪದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿಯಾಗಿ ಜರುಗಿತು. ಡಾ. ದಯಾನಂದ ಹಾಗೂ ಡಾ. ಇಲಿಯಾಸ ಕಣ್ಣಿನ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದರು. ಈ ಸಂದರ್ಭದಲ್ಲಿ ಬಿ.ಎನ್. ಖಂಡೇಕರ, ರಮೇಶ ಮಹದೇಪ್ಪನವರ, ಸಂಸ್ಥೆಯ ಅಧ್ಯಕ್ಷ ಬಸವರಾಜ ಕುಡವಕ್ಕಲಗೇರ, ಹರೀಶ ಮನಕವಾಡ ಇದ್ದರು.
ಆರಾಧನಾ ಮಹೋತ್ಸವ
ಧಾರವಾಡ: ಶ್ರೀ ರಾಘವೇಂದ್ರ ಸ್ವಾಮಿಗಳ 342ನೇ ಆರಾಧನಾ ಮಹೋತ್ಸವವನ್ನು ಇಲ್ಲಿನ ದೇಸಾಯಿ ಗಲ್ಲಿಯ ರಾಯರ ಮಠದಲ್ಲಿ ಮೂರು ದಿನಗಳ ಕಾಲ ಯಶಸ್ವಿಯಾಗಿ ಆಚರಿಸಲಾಯಿತು. ಮಹೋತ್ಸವ ನಿಮಿತ್ತ ವಿಶೇಷ ಅಷ್ಟೋತ್ತರ ರಥೋತ್ಸವ ನಡೆಸಲಾಯಿತು. ಈ ಸಂದರ್ಭದಲ್ಲಿ ಸುಧೀಂದ್ರಾಚಾರ್ಯ ಮೊರಬ, ಗುರುರಾಜಾಚಾರ್ಯ, ಪಂ. ರಾಘವೇಂದ್ರ ಗುಡಿ, ವಿರೂಪಾಕ್ಷ ದಿಕ್ಷೀತ್, ಅನುಷಾ ನಾಡಗೇರ, ಎಸ್.ಎಚ್. ಕಾಂತನವರ ಇದ್ದರು.
ಮಂಗಳಸೂತ್ರ ಅಪಹರಣ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಶ್ರೀನಿವಾಸ ಗಾರ್ಡನ್ ಹತ್ತಿರ ಮೊಮ್ಮಕ್ಕಳೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯೊಬ್ಬಳ ಕೊರಳಲ್ಲಿದ್ದ 17 ಗ್ರಾಂ ತೂಕದ ಮಂಗಳಸೂತ್ರವನ್ನು ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ಅಪಹರಿಸಿಕೊಂಡು ಪರಾರಿಯಾಗಿದ್ದಾರೆ.  ಹಳೇ ಹುಬ್ಬಳ್ಳಿ ನಾಗಲಿಂಗನಗರ ನಿವಾಸಿ ಮಲ್ಲವ್ವ ಶಿವಪುತ್ರ ವಿಭೂತಿ (60) ಅವರು ಮೊಮ್ಮಕ್ಕಳಿಗೆ ಆಟಿಗೆ ಸಾಮಾನು ಖರೀದಿಸಲು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಹಿಂದಿನಿಂದ ಬಂದ ಬೈಕ್ ಸವಾರರಿಬ್ಬರು ಚಿನ್ನದ ಮಂಗಳಸೂತ್ರ ಕಿತ್ತುಕೊಂಡು ಹೋಗಿದ್ದಾರೆ ಎಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement