ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಆಲೂಗಡ್ಡೆ ಬೆಳೆ ಕುರಿತ ತರಬೇತಿ

Lingaraj Badiger
Updated On : 27 Aug 2013, 11:43 am

ಧಾರವಾಡ: ಕೃಷಿ ವಿವಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮತ್ತು ಅಖಿಲ ಭಾರತ ಆಲೂಗಡ್ಡೆ ಸಂಶೋಧನಾ ಸಮನ್ವಯ ಯೋಜನೆ ಆಶ್ರಯದಲ್ಲಿ ತಾಲೂಕಿನ ಕುಂಬಾಪುರದಲ್ಲಿ ಆಲೂಗಡ್ಡೆ ಬೆಳೆಯ ಕ್ಷೇತ್ರೋತ್ಸವ ಹಾಗೂ ತರಬೇತಿ ಗುರುವಾರ ನಡೆಯಿತು.
ತರಬೇತಿಯಲ್ಲಿ ಆಲೂಗಡ್ಡೆ ಬೆಳೆ ಸುಧಾರಿತ ತಂತ್ರಜ್ಞಾನದಿಂದ ಇಳುವರಿ ಹೆಚ್ಚಿಸಿಕೊಂಡು ಆರ್ಥಿಕ ಮಟ್ಟವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎಂಬುದನ್ನು ಅಧ್ಯಕ್ಷತೆ ವಹಿಸಿದ್ದ ಸಂಶೋಧನಾ ನಿರ್ದೇಶಕ ಡಾ. ಜೆ. ವೆಂಕಟೇಶ ಮಾತನಾಡಿದರು. ಬಾಗಲಕೋಟೆ ತೋಟಗಾರಿಕೆ ವಿವಿ ವಿಸ್ತರಣಾ ನಿರ್ದೇಶಕ ಡಾ.ಎ.ಬಿ. ಪಾಟೀಲ, ಶಿರಸಿ ತೋಟಗಾರಿಕೆ ಕಾಲೇಜು ಡೀನ್ ಡಾ.ಎನ್. ಬಸವರಾಜ, ಡಾ.ಕೆ. ರಾಮಚಂದ್ರ ನಾಯ್ಕ, ಆಲೂಗಡ್ಡೆ ವಿವಿಧ ತಳಿಗಳ ಮಾಹಿತಿ, ಆಧುನಿಕ ತಂತ್ರಜ್ಞಾನಗಳು ಪೋಷಕಾಂಶಗಳ ನಿರ್ವಹಣೆ, ಕೊಯ್ಲೋತ್ತರ ತಂತ್ರಜ್ಞಾನ, ಮೌಲ್ಯವರ್ಧನೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಡಾ. ಜ್ಞಾನೇಶ್ವರ ಗೋಪಾಲಿ, ಡಾ.ಎಸ್.ಐ. ಅಥಣಿ, ಡಾ.ಟಿ.ಬಿ. ಅಳ್ಳೊಳ್ಳಿ, ಡಾ.ಬಿ.ಸಿ. ಪಾಟೀಲ, ಎಸ್.ಎಸ್. ಅಂಗಡಿ, ಶೋಭಾ ಕನಮಡಿ, ಕವಿತಾ, ರವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement