ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಉದ್ದಿಮೆಗೆ ಬ್ಯಾಂಕಿನಿಂದ ಉತ್ತಮ ಅವಕಾಶವಿದೆ: ದುಬೆ

Lingaraj Badiger
Updated On : 27 Aug 2013, 11:42 am

ಹುಬ್ಬಳ್ಳಿ: ಅತ್ಯಂತ ಕಡಿಮೆ ಹಾಗೂ ಶೂನ್ಯ ಬಂಡವಾಳ ಹೂಡಿಕೆಯೊಂದಿಗೆ ಉದ್ದಿಮೆ ಹೊಂದಲು ತಮ್ಮ ಬ್ಯಾಂಕಿನಲ್ಲಿ ಅವಕಾಶಗಳಿವೆ ಎಂದು ಕೆನರಾ ಬ್ಯಾಂಕಿನ ಚೇರ್‌ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ದುಬೆ ಹೇಳಿದರು.
ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆನರಾ ಬ್ಯಾಂಕ್ ದಕ್ಷಿಣ ಭಾರತದಲ್ಲಿ ತನ್ನ ವ್ಯವಹಾರದ ವ್ಯಾಪ್ತಿ ಹೆಚ್ಚಿಸಿಕೊಂಡಿದ್ದು, ಕೇರಳದಲ್ಲಿ ಪ್ರಥಮ ಸ್ಥಾನದಲ್ಲಿ ಇದೆ ಎಂದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ, ಬೃಹತ್ ಕೈಗಾರಿಕೋದ್ಯಮಿಗಳನ್ನು ಹಾಗೂ ಮಹಿಳಾ ಉದ್ದಿಮೆದಾರರು, ಕರಕುಶಲಗಾರರಿಗೆ ಪ್ರೋತ್ರಾಹಿಸಲು ಕೆನರಾ ಬ್ಯಾಂಕಿನಲ್ಲಿ ಹಲವಾರು ಯೋಜನೆಗಳಿವೆ ಎಂದರು.
ಈ ಭಾಗದಲ್ಲಿ ಕೆನರಾ ಬ್ಯಾಂಕ್ 7 ವೃತ್ತ ಕಚೇರಿಗಳನ್ನು ಹೊಂದಿದ್ದು, ಬ್ಯಾಂಕಿಂಗ್ ವ್ಯವಹಾರ ವಿಸ್ತರಿಸಲು ಇನ್ನೂ ಹಲವಾರು ಶಾಖೆಗಳನ್ನು ತೆರೆಯಲಾಗುವುದು. ಜೊತೆಗೆ ಜಾಗತಿಕ ಮಟ್ಟದಲ್ಲಿಯೂ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಶೀಘ್ರದಲ್ಲಿ ನ್ಯೂಯಾರ್ಕ್, ದುಬೈ, ದಕ್ಷಿಣ ಆಫ್ರಿಕಾ ರಾಷ್ಟ್ರಗಳಲ್ಲಿ ಬ್ಯಾಂಕಿನ ಶಾಖೆ ಸ್ಥಾಪಿಸಲಾಗುವುದು. ಇದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸಹ ಅನುಮತಿ ನೀಡಿದೆ ಎಂದರು.
ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಆರ್.ಆರ್. ಶರ್ಮಾ, ಡಿಜಿಎಂ ಎಂ.ಬಿ. ಜಯರಾಮರೆಡ್ಡಿ, ಹಿರಿಯ ವ್ಯವಸ್ಥಾಪಕ ಆರ್.ಆರ್. ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎನ್.ಪಿ. ಜವಳಿ, ವಸಂತಾ ಲದವಾ, ಅಂದಾನಪ್ಪ ಸಜ್ಜನರ, ಮಹೇಂದ್ರ ಲದ್ದಡ, ವಿಶ್ವನಾಥ ಗಿಣಿಮಾವ, ಸಿ.ಎನ್. ಕರಿಕಟ್ಟಿ, ಮದನ ದೇಸಾಯಿ, ಎಂ.ಸಿ. ಹಿರೇಮಠ ಇನ್ನಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement