ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಗೆಲವು ಅವಿಸ್ಮರಣೀಯ

Lingaraj Badiger
Updated On : 27 Aug 2013, 11:32 am

ಧಾರವಾಡ: ಚುನಾವಣೆಯಲ್ಲಿ ಹಣ ಹಾಗೂ ತೋಳ್ಬಲ ಎಂದೂ ಮುಖ್ಯ ಪಾತ್ರ ವಹಿಸಲಾರದು ಎಂಬ ಮಾತಿಗೆ ನನ್ನ ಈ ಗೆಲುವೇ ನಿದರ್ಶನ. ಬಿಜೆಪಿ, ಕೆಜೆಪಿ ಒಂದುಗೂಡಿ ಜೆಡಿಎಸ್ ಬೆಂಬಲ ಪಡೆದಿದ್ದರೂ ಮಾಜಿ ಮುಖ್ಯಮಂತ್ರಿ ಸಹೋದರನ ವಿರುದ್ಧದ ಈ ಗೆಲವು ಅವಿಸ್ಮರಣೀಯ ಎಂದು ವಿಧಾನ ಪರಿಷತ್ ಚುನಾವಣೆ ವಿಜೇತ ಅಭ್ಯರ್ಥಿ ನಾಗರಾಜ ಛಬ್ಬಿ ಇಲ್ಲಿ ಹೇಳಿದರು.
ಸಮೀಪದ ಕೃಷಿ ವಿವಿ ಮುಖ್ಯ ಕಟ್ಟಡದಲ್ಲಿ ಸೋಮವಾರ ನಡೆದ ಮತ ಎಣಿಕೆ ಕೇಂದ್ರದ ಬಳಿ ಗೆಲವು ಘೋಷಣೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಸಾಮಾನ್ಯ ಕಾರ್ಯಕರ್ತನಾದ ನನ್ನ ಗೆಲವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯವೈಖರಿ, ಸಚಿವ, ಶಾಸಕರ ಹಾಗೂ ಪಕ್ಷದ ಕಾರ್ಯಕರ್ತರ ಸಂಘಟಿತ ಪ್ರಯತ್ನವೇ ಕಾರಣ. ಈ ಅವಕಾಶವನ್ನು ತಮ್ಮ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಸದುಪಯೋಗ ಪಡಿಸಿಕೊಂಡು ಪಕ್ಷ ಸಂಘಟನೆ ಮಾಡುವುದಾಗಿ ಛಬ್ಬಿ ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಸಿಕ್ಕಿರುವ ಗೆಲವು ಸರ್ಕಾರದ ಉತ್ತಮ ಆಡಳಿತಕ್ಕೆ ಹಿಡಿದ ಕನ್ನಡಿ. ಅವಕಾಶವಾದಿಗಳಿಗೆ ಇದು ಸೋಲು ಎಂದರು. ಮತ ಎಣಿಕೆ ಸಂದರ್ಭದಲ್ಲಿ ಕಾಂಗ್ರೆಸ್ ದೀಪಕ ಚಿಂಚೋರೆ ಬಿಟ್ಟರೆ ಮತ್ತಾವ ಮುಖಂಡರು ಇರಲಿಲ್ಲ. ಪ್ರಥಮ ಪ್ರಾಶಸ್ತ್ಯದ ಮತಗಳ ಎಣೆಕೆ ಮಾಡಿದಾಗ ಛಬ್ಬಿ ಗೆಲವು ಖಚಿತವಾಯಿತು. ಆಗ ಮತ ಎಣಿಕೆ ಕೇಂದ್ರಕ್ಕೆ ಮುಖಂಡರ ದಂಡೇ ಹಾಜರಾಗಿತ್ತು. ಮಧ್ಯಾಹ್ನ 12.30ರಿಂದ ಸಂಜೆ 4ರ ವರೆಗೂ ತಾಂತ್ರಿಕ ಕಾರಣದಿಂದ ಚುನಾವಣಾಧಿಕಾರಿಗಳು ಗೆಲವು ಘೋಷಿಸಲಿಲ್ಲ. ಆದರೂ ಸಚಿವರಾದ ಸಂತೋಷ ಲಾಡ್, ಪ್ರಕಾಶ ಹುಕ್ಕೇರಿ, ಶಾಸಕರಾದ ವಿನಯ ಕುಲಕರ್ಣಿ, ಸಿ.ಎಸ್. ಶಿವಳ್ಳಿ, ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಸದಾನಂದ ಡಂಗನವರ, ವಿ.ಡಿ. ಕಾಮರೆಡ್ಡಿ, ವಿಜಯ ಕುಲಕರ್ಣಿ, ಶೈಲಾ ಕಾಮರೆಡ್ಡಿ, ವಸಂತ ಅರ್ಕಾಚಾರ ಇದ್ದರು. ಇತ್ತ ಬಿಜೆಪಿ ಮುಖಂಡರು ಅಭ್ಯರ್ಥಿ ಪ್ರದೀಪ ಶೆಟ್ಟರ ಪರ ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಮುಖಂಡರಾದ ಮಲ್ಲಿಕಾರ್ಜುನ ಸಾವುಕಾರ, ಈರೇಶ ಅಂಚಟಗೇರಿ, ಲಿಂಗರಾಜ ಪಾಟೀಲ ಇದ್ದರು. ಆರಂಭದಲ್ಲಿ ಗೆಲುವಿನ ವಿಶ್ವಾಸದಲ್ಲಿದ್ದ ಬಿಜೆಪಿ ಮುಖಂಡರು ತದನಂತರ ಬೇಸರಗೊಂಡು ಒಬ್ಬೊಬ್ಬರಾಗಿ ಮನೆಯ ಹಾದಿ ಹಿಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement