ಛಬ್ಬಿ ಗೆಲವು; ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಹುಬ್ಬಳ್ಳಿ: ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಸೋಮವಾರ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ನಗರದ ದುರ್ಗದ ಬೈಲ್‌ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿದ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಮಹೇಶ ಕಮತರ, ಅಷ್ಪಾಕ್ ಕುಮಟಾಕರ್, ರಾಜಾ ದೇಸಾಯಿ, ಮಹೇಂದ್ರ ಸಿಂಘಿ, ಸದಾನಂದ ಡಂಗನವರ, ಸಿದ್ದು ಹಿರೇಮಠ, ಮಹಾನಗರ ಪಾಲಿಕೆ ಸದಸ್ಯ ಮೋಹನ ಹಿರೇಮನಿ, ಮಂಜು ಉಳ್ಳಾಗಡ್ಡಿ, ಶರಣಪ್ಪ ಕೊಟಗಿ, ಸಿ.ಎಚ್. ಗೊಬ್ಬಿ, ಶಿರಾಜ ಅಹ್ಮದ್ ಕುಡಚಿವಾಲೆ, ಮಹೇಶ ದಾಬಡೆ, ರವಿ ಬದ್ನಿ, ಸುವರ್ಣ ಕಲಕುಂಟ್ಲ, ಜೆ.ಡಿ. ಇಂಗಳಗಿ, ಆರ್.ಐ. ಸಿಕಂದರ್, ಅಬ್ದುಲ್ ಗಣಿ ಬಂಕಾಪುರ, ವೀರಣ್ಣ ಹಿರೇಹಾಳ ಸೇರಿದಂತೆ ಇನ್ನಿತರರು ಇದ್ದರು.