ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕೋಸಿ ಪರಿಕ್ರಮ ಯಾತ್ರೆ ಅನುಮತಿಗೆ ಒತ್ತಾಯ

Mainashree
Updated On : 28 Aug 2013, 11:33 am

ಹುಬ್ಬಳ್ಳಿ: ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 70 ಎಕರೆ ಜಾಗ ನೀಡಬೇಕು. 84 ಕೋಸಿ ಪರಿಕ್ರಮ ಯಾತ್ರೆಗೆ ಉತ್ತರಪ್ರದೇಶ ಸರ್ಕಾರ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ವಿಶ್ವಹಿಂದೂ ಪರಿಷದ್ ಕಾರ್ಯಕರ್ತರು ದುರ್ಗದ ಬೈಲ್ನಲ್ಲಿ ಪ್ರತಿಭಟಿಸಿದರು.
ನ್ಯಾಯಾಲಯದ ತೀರ್ಪು ಹಿಂದುಗಳ ಪರವಾಗಿ ಬಂದರೂ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿಸುತ್ತಿಲ್ಲ ಬದಲಿಗೆ ಆಯೋಧ್ಯೆಯಲ್ಲಿ ಮುಸ್ಲಿಂರಿಗೆ 100 ಎಕರೆ ಜಾಗ ನೀಡುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಮುಖಂಡ ರಂಗಾ ಬದ್ದಿ, ವಿಶ್ವಹಿಂದೂ ಪರಿಷದ್ ಕಾರ್ಯದರ್ಶಿ ಸಂತೋಷ ಇವಣಿ, ನಗರ ಸಹಕಾರ್ಯದರ್ಶಿ ಶಿವಯ್ಯ ಹಿರೇಮಠ, ಬಜರಂಗದಳ ನಗರ ಸಂಚಾಲಕ ಗಣು ಜರತಾರಘರ್ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement