ಜಿಮಖಾನಾ ಮುಕ್ತಗೊಳಿಸಿ: ತಹಸೀಲ್ದಾರ್ಗೆ ಮನವಿ
ಹುಬ್ಬಳ್ಳಿ: ಜಿಮಖಾನಾ ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿ ಎಂದು ಗ್ರೌಂಡ್ ಬಚಾವೋ ಸಮಿತಿ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
2008ರ ಮುಂಚೆ ಮೈದಾನವನ್ನು ಸಾರ್ವಜನಿಕರು ಉಪಯೋಗಿಸತ್ತಿದ್ದರು. ಮತ್ತೆ ಅದೇ ವ್ಯವಸ್ಥೆಗೆ ಮರಳಬೇಕು. ಜಿಮಖಾನಾ ಮೈದಾನದಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ಸರ್ಕಾರ ತಕ್ಷಣ ತನ್ನ ವಶಕ್ಕೆ ತೆಗೆದುಕೊಂಡು ಮೈದಾನವನ್ನು ಸುತ್ತಲಿನ ಪ್ರದೇಶದ ನಾಗರಿಕರಿಗೆ ವಾಯು ವಿಹಾರ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಮೀಸಲು ಇಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರೌಂಡ್ ಬಚಾವೋ ಸಮಿತಿ ಅಧ್ಯಕ್ಷ ಸಿಬಿಎಲ್ ಹೆಗ್ಡೆ, ಕರವೇ ಅಧ್ಯಕ್ಷ ಅಮೃತ ಇಜಾರಿ, ವೆಂಕಟೇಶ ಸವದತ್ತಿ, ಅಭಿಮನ್ಯು ಮಡಿವಾಳರ, ಶೀಲಾ ಮಿರ್ಜಿ ಸೇರಿದಂತೆ ಇನ್ನಿತರರು ಇದ್ದರು.