ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪಾರಿವಾಳ ಹಾರಾಟ ಸ್ಪರ್ಧೆ: ಬಹುಮಾನ ವಿತರಣೆ

Mainashree
Updated On : 28 Aug 2013, 11:33 am

ಧಾರವಾಡ: ಇಲ್ಲಿನ ನಿವೃತ್ತ ನೌಕರರ ಸಭಾ ಭವನದಲ್ಲಿ ನಡೆದ ಬಹುಮಾನ ವಿತರಣೆಯಲ್ಲಿ ತಾಲೂಕು ಗಿರೇಬಾಜಿ ಪಾರಿವಾಳಗಳ ಹಾರಾಟ ಸ್ಫರ್ಧೆಯಲ್ಲಿ ನಿರಂತರವಾಗಿ 9.58 ಗಂಟೆ ಹಾರಿದ ಗಾಮನಗಟ್ಟಿಯ ಫಕ್ಕೀರಪ್ಪ ಶಲವಡಿ ಅವರ ಪಾರಿವಾಳಕ್ಕೆ ರು. 5 ಸಾವಿರ ಪ್ರಥಮ ಬಹುಮಾನ ನೀಡಲಾಯಿತು.
9.37 ಗಂಟೆ ಹಾರಿದ ಧಾರವಛಡಾಡದ ಮೊಹಮ್ಮದ ಗರಗ ಎಂಬುವರ ಪಾರಿವಾಳಕ್ಕೆ ರು. 3 ಸಾವಿರ ದ್ವಿತೀಯ ಬಹುಮಾನ ಹಾಗೂ 7.16 ಹಾಗೂ 6.11 ಗಂಟೆ ಹಾರಿದ ಯಮುನಪ್ಪ ಹಾಗೂ ದೇವಾನಂದ ಪವಾರ ಎಂಬುವರ ಪಾರಿಳವಾಳಕ್ಕೆ ತಲಾ ರು. 1 ಸಾವಿರ ತೃತೀಯ ಬಹುಮಾನ ದಕ್ಕಿತು. ಶಾಸಕ ಅರವಿಂದ ಬೆಲ್ಲದ ಸಮಾರಂಭ ಉದಛ್ಘಾಟಿಸಿದರು. ಪಾರಿವಾಳ ಪ್ರೇಮಿಗಳ ಸಂಘದ ಅಧ್ಯಕ್ಷ ಅರವಿಂದ ಏಗನಗೌಡರ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಸೀಮಾ ಮಸೂತಿ, ಪಾಲಿಕೆ ಸದಸ್ಯ ಶ್ರೀಕಾಂತ ಜಮನಾಳ, ಅಬೂಬಕ್ಕರ ಶೇಖ್, ಚಂದ್ರಶೇಖರ ಸಬರದ, ರಮೇಶ ಅಬ್ಬಿಗೇರಿ, ಟೋನಿ ನಾಗಾಪುರ, ಕಲಂದರ ಹುಬ್ಬಳ್ಳಿ, ಕೆ. ರಾಮಚಂದ್ರರಾವ್, ಹಯಾತ್ ಗರಗ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement