ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಯುವತಿ ಅಪಹರಣ: ಪ್ರಕರಣ ದಾಖಲು

Mainashree
Updated On : 28 Aug 2013, 11:33 am

ನವಲಗುಂದ: ನಗರದ ಯುವಕನೊಬ್ಬ ಅಪ್ರಾಪ್ತ ಯುವತಿಯನ್ನು ಪುಸಲಾಯಿಸಿ ಅಪಹರಣ ಮಾಡಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ ಎಂದು ತಾಯಿ ಅನ್ನಪೂರ್ಣಾ ಹಳಕಟ್ಟಿ ನವಲಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಅಪಹರಣಕ್ಕೊಳಗಾದ ಯುವತಿ ರೇಣುಕಾ (17 ವರ್ಷ 10 ತಿಂಗಳು). ಆಕೆಯನ್ನು ಟಿಪ್ಪುಸುಲ್ತಾನ ಜಿಗಳೂರ ಎಂಬಾತ ಅಪಹರಿಸಿಕೊಂಡು ಹೋಗಿದ್ದಾನೆ.
ಇದೇ ರೀತಿ ಎರಡು ತಿಂಗಳ ಹಿಂದೆ ಈತ ನನ್ನ ಮಗಳನ್ನು ಅಪಹರಿಸಿದ್ದ.
ನಂತರ ಹಿರಿಯರ ಸಮಕ್ಷಮ ಆತನಿಗೆ ಬುದ್ಧಿ ಹೇಳಲಾಗಿತ್ತು. ಹೀಗಾಗಿ, ದೂರು ದಾಖಲಿಸಿರಲಿಲ್ಲ. ಈಗ ಮತ್ತೆ ಮಗಳನ್ನು ಅಪಹರಿಸಿದ್ದಾನೆ. ನನ್ನ ಮಗಳನ್ನು ಪತ್ತೆ ಮಾಡಿ ಕೊಡುವಂತೆ ತಾಯಿ ದೂರು ನೀಡಿದ್ದಾಳೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement