ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವರದಕ್ಷಿಣೆ ಕಿರುಕುಳ ಪ್ರಕರಣ

Mainashree
Updated On : 28 Aug 2013, 11:32 am

ನವಲಗುಂದ: ವರದಕ್ಷಿಣೆ ಕಿರುಕುಳ ನೀಡಿ ಗಂಡನ ಮನೆಯವರು ನವ ವಿವಾಹಿತೆಗೆ ಸೀಮೆಎಣ್ಣೆ ಕುಡಿಸಿ ಕೊಲೆಗೆ ಪ್ರಯತ್ನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಅಣ್ಣಿಗೇರಿ ನಗರದ ಜುಬೇದಾ ಶಿರಕೋಳ (19) ಎಂಬಾಕೆಯನ್ನು ಎರಡೂವರೆ ತಿಂಗಳ ಹಿಂದೆ ನವಲಗುಂದದ ಕಳ್ಳಿಮಠ ಓಣಿಯ ನಿವಾಸಿ ಅಬ್ದುಲ್ ರಹೆಮಾನಸಾಬ ಶಿರಕೋಳ (25) ಎಂಬಾತನ ಜತೆ ವರದಕ್ಷಿಣೆಯಾಗಿ ರು. 15 ಸಾವಿರ ನಗದು ಹಾಗೂ ಒಂದು ತೊಲೆ ಬಂಗಾರ ನೀಡಿ ಮದುವೆ ಮಾಡಿಕೊಡಲಾಗಿತ್ತು.
ಆ. 17ರಂದು ಬೆಳಗ್ಗೆ ಕೆಲಸ ಮಾಡುತ್ತಿದ್ದ ಜುಬೇದಾಳಿಗೆ ಗಂಡ ಅಬ್ದುಲ್ ರಹೆಮಾನ, ಮೈದುನ ಇಬ್ರಾಹಿಂಸಾಬ ಹಾಗೂ ನಾದಿನಿ ನೂರಜಹಾನ ಮೂವರು ಸೇರಿ ಹಿಡಿದು ಸೀಮೆಎಣ್ಣೆ ಕುಡಿಸಿದ್ದಾರೆ. ಅಷ್ಟೇ ಅಲ್ಲದೇ ಮೈಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಪ್ರಯತ್ನ ಮಾಡಿದ್ದಾರೆ.
ವಿಷಯ ತಿಳಿದ ಜುಬೇದಾಳ ಸಹೋದರ ಇಮಾಮಸಾಬ ತಂಗಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿ ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ವೈದ್ಯಾಧಿಕಾರಿಗಳು ಈಕೆಗೆ ಹೆಚ್ಚಿನ ಚಿಕಿತ್ಸೆ ನೀಡಬೇಕೆಂದು ಹುಬ್ಬಳ್ಳಿಯ ಕಿಮ್ಸಗೆ ಕಳುಹಿಸಿದ್ದಾರೆ.
ಇಂದರಿಂದ ನೊಂದ ಜುಬೇದಾ ಪೊಲೀಸರಿಗೆ ವಿಷಯ ತಿಳಿಸಿ ಆರೋಪಿಗಳಿಗೆ ಸೂಕ್ತ ಕಾನುನು ಕ್ರಮ ಜರುಗಿಸಬೇಕೆಂದು ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement