ಕಿಮ್ಸ್ ನಿರ್ದೇಶಕ ಹುದ್ದೆ: ಸೆ.6ಕ್ಕೆ ವಿಚಾರಣೆ
ಧಾರವಾಡ: ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕಿ ಡಾ. ವಸಂತಾ ಕಾಮತ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ವಿಚಾರಣೆಯು ಸೆ.6ಕ್ಕೆ ಮುಂದೂಡಲಾಗಿದೆ. ಇಲ್ಲಿನ ಹೈಕೋರ್ಟ್ ಪೀಠದಲ್ಲಿ ಗುರುವಾರ ನ್ಯಾಯಮೂರ್ತಿ ವೇಣುಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠ ಪ್ರತಿವಾದಿ ಪೈಕಿ ಸರ್ಕಾರದ ವಾದ ಆಲಿಸಿ ಇನ್ನೊಬ್ಬ ಪ್ರತಿವಾದಿ ಕಿಮ್ಸ್ ಪರ ವಕೀಲರ ವಾದ ಮಂಡನೆಗಾಗಿ ದಿನಾಂಕ ನಿಗದಿಪಡಿಸಿ ವಿಚಾರಣೆಯನ್ನು ಮುಂದೂಡಿತು. ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎಚ್. ಕಾಂತರಾಜು ವಾದ ಮಂಡಿಸಿ ಸರ್ಕಾರದ ಕ್ರಮ ಸಮರ್ಥಿಸಿಕೊಂಡರು. ಕಿಮ್ಸ್ ಪರವಾಗಿ ಹಿರಿಯ ವಕೀಲ ಸುಬ್ರಹ್ಮಣ್ಯ ಜೋಯ್ಸ್ ಇದ್ದರು. ಅರ್ಜಿದಾರರ ಪರವಾಗಿ ಕೆ.ಎಲ್. ಪಾಟೀಲ್ ವಾದ ಮಂಡಿಸಿದರು.