'ಜಡ್ಜ್ ನಿವೃತ್ತಿ ವಯೋವುತಿ ಹೆಚ್ಚಿಸಿ'
ಧಾರವಾಡ: ನ್ಯಾಯಧೀಶರ ನಿವೃತ್ತಿಯ ವಯೋವುತಿಯನ್ನು ಹೆಚ್ಚಿಸುವುದರಿಂದ ಪ್ರಕರಣಗಳ ಶೀಘ್ರ ವಿಲೇವಾರಿ ಸಾಧ್ಯ ಎಂದು ಅಂತಾರಾಷ್ಟ್ರೀಯ ನ್ಯಾಯವಾದಿಗಳ ಮಂಡಳಿ ಅಧ್ಯಕ್ಷ ಆದೀಶ ಅಗರವಾಲಾ ಹೇಳಿದರು.
ಅಲೆಕ್ಸ್ ಸೆಂಟರ್ ಫಾರ್ ಸ್ಟಡಿ ಆ್ಯಂಡ್ ರಿಸರ್ಚ್ ಇನ್ ಲಾ ಗುರುವಾರ ಆಯೋಜಿಸಿದ್ದ ಜಾಗತಿಕ ಕಾನೂನು ಸಂವಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ನ್ಯಾಯಾಲಯದಲ್ಲಿ ಪ್ರಕರಣಗಳ ವಿಲೇವಾರಿ ಪ್ರಕ್ರಿಯೆ ಜೋರಾಗಿದ್ದರೂ ಕೆಲವು ಅಡೆ-ತಡೆಗಳನ್ನು ನಿವಾರಿಸುವ ಮೂಲಕ ಇನ್ನಷ್ಟು ಶೀಘ್ರಗತಿಯಲ್ಲಿ ಪ್ರಕರಣಗಳ ವಿಲೇವಾರಿ ಮೂಲಕ ನ್ಯಾಯದಾನ ನೀಡಬೇಕಿದೆ ಎಂದರು. ಅತ್ಯಾಚಾರ, ಭಯೋತ್ಪಾದನೆ, ನಕ್ಸಲ್ ಚಟುವಟಿಕೆಯಂಥ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಸಮಾಜ ಮುಂದಿನ ಪೀಳಿಗೆಗೆ ಭದ್ರತೆ ನೀಡುವ ಅಗತ್ಯವಿದೆ ಎಂದು ತಿಳಿಸಿದರು.