ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಜಿಮಖಾನಾ ಮೈದಾನ ಬಂಧಮುಕ್ತ?

Mainashree
Updated On : 30 Aug 2013, 10:42 am

ಹುಬ್ಬಳ್ಳಿ: 20 ದಿನಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡಿದ ಗ್ರೌಂಡ್ ಬಚಾವೋ ಸಮಿತಿ ಕಾರ್ಯಕರ್ತರು ಗುರುವಾರ ಜಿಮಖಾನಾ ಮೈದಾನಕ್ಕೆ ನುಗ್ಗಿ, ಅತಿಕ್ರಮಣದಿಂದ ಮೈದಾನ ಮುಕ್ತಗೊಂಡಿತು ಎಂದು ಹರ್ಷೋದ್ಗಾರ ವ್ಯಕ್ತಪಡಿಸಿದರು.
ಪೊಲೀಸ್ ಕಾವಲಿನಲ್ಲಿದ್ದ ಮೈದಾನದಲ್ಲಿ ಒಳನುಗ್ಗಿದ ಕಾರ್ಯಕರ್ತರು ಇನ್ನು ಮುಂದೆ ಮೈದಾನಕ್ಕೆ ಸಾರ್ವಜನಿಕರು ಮುಕ್ತವಾಗಿ ಪ್ರವೇಶಿಸಬಹುದಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ಹೇಳಿ ನಾಳೆಯಿಂದ ಜಿಮಖಾನಾ ಮೈದಾನದಲ್ಲಿ ಸಾರ್ವಜನಿಕರು ಕ್ರಿಕೆಟ್ ಆಡಲಿದ್ದಾರೆ ಎಂದರು.
ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಉಪಸ್ಥಿತಿಯಲ್ಲಿ ಗ್ರೌಂಡ್ ಬಚಾವೋ ಸಮಿತಿ ಅಧ್ಯಕ್ಷ ಸಿಬಿಎಲ್ ಹೆಗ್ಡೆ, ಆಮ್ ಆದ್ಮಿ ಪಾರ್ಟಿಯ ಶೈಲೇಂದ್ರಕುಮಾರ್ ಪಾಟೀಲ, ಜೈ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮೈದಾನಕ್ಕೆ ನುಗ್ಗಿ ಸಂಸದ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ವಿರುದ್ಧ ಘೋಷಣೆ ಕೂಗಿದರು.
ಇದಕ್ಕೂ ಮುನ್ನ ಮಾತನಾಡಿದ ಪಾಟೀಲ ಪುಟ್ಟಪ್ಪ, ಗ್ರೌಂಡ್ ಬಚಾವೋ ಸಮಿತಿ ಹಮ್ಮಿಕೊಂಡಿರುವ ಹೋರಾಟ ನ್ಯಾಯ ಮತ್ತು ಅನ್ಯಾಯದ ನಡುವೆ ನಡೆಯುತ್ತಿರುವ ಹೋರಾಟ, ಜನರು ನ್ಯಾಯದ ಪರವಾಗಿ ಹೋರಾಟಕ್ಕೆ ನಿಲ್ಲಬೇಕು. ಒಂದು ವೇಳೆ ಹೋರಾಟಕ್ಕೆ ನಿಲ್ಲದಿದ್ದರೆ ಅನ್ಯಾಯವನ್ನು ಬೆಂಬಲಿಸಿದಂತಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement