ಮೈದಾನ ಮುಕ್ತಗೊಳಿಸಿ
ಧಾರವಾಡ: ಹುಬ್ಬಳ್ಳಿ ದೇಶಪಾಂಡೆ ನಗರದ ರಿಕ್ರಿಯೇಷನ್ ಕ್ಲಬ್ನ್ನು ಸಾರ್ವಜನಿಕರಿಗೆ ಆಟದ ಮೈದಾನವಾಗಿ ಉಪಯೋಗಿಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಬುಧವಾರ ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ಸಲ್ಲಿಸಿತು.
ರು. 140 ಕೋಟಿಗೂ ಅಧಿಕ ಬೆಲೆ ಬಾಳುವ ಎಂಟು ಎಕರೆಯ ಸಾರ್ವಜನಿಕ ಆಟದ ಮೈದಾನ ಇದೀಛಗ ಪ್ರಬಲ ರಾಜಕಾರಣಿಗಳು ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಈ ಅತಿಕ್ರಮಣಕ್ಕೆ ಈ ಹಿಂದಿನ ಜಿಲ್ಲಾಧಿಕಾರಿ ದರ್ಪಣ್ ಜೈನ ರಾಜಕಾರಣಿಗಳಿಗೆ ಸಹಕರಿಸುವ ಮೂಲಕ ಮೈದಾನವನ್ನು ಕ್ಲಬ್ ಹೆಸರಿನಲ್ಲಿ ದುರ್ಬಳಕೆಗೆ ಎಡೆ ಮಾಡಿಕೊಟ್ಟಿದ್ದಾರೆ. ಈ ಕ್ಲಬ್ನಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಪಾತ್ರವಿದೆ ಎಂದು ಸಂಘಟನೆ ಪದಾಧಿಕಾರಿಗಳು ಆರೋಪಿಸಿದರು.
ಅತಿಕ್ರಮಿಸಿಕೊಂಡ ಮೈದಾನವನ್ನು ರಾಜಕಾರಣಿಗಳು ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಮಾಡಿಕೊಡಬೇಕೆಂದು ಸಂಘಟನೆ ಜಿಲ್ಲಾಧ್ಯಕ್ಷ ರಮೇಶ ಬದ್ನೂರ, ರೆಹಮಾನ್ ಹೋಳಿ, ಹನುಮಂತಪ್ಪ ಮೇಟಿ, ರಾಜೇಶ್ವರಿ ಸುಂಕದ, ಕುಮಾರ ಪಾಟೀಲ, ಅಮೃತ ಹಿಜಾರೆ, ವಿಠ್ಠಲ ಕಂಬಾರಗಣವಿ, ರುದ್ರಗೌಡ ಶಿಂದೋಗಿ, ಸಣ್ಣಶಿವಲಿಂಗಪ್ಪ ಮಟಗೊಡ್ಲಿ, ಅಜಾದ ಜಾಲೆಗಾರ, ಬಸವರಾಜ ಸಣ್ಣಗೌಡರ, ಮಂಜು ಜಗದಾಳ, ನಾಸೀರ ಖಾಜಿ, ಪರಮೇಶ ರೆವಡ್ಯಾಳ, ಮಾಬುಲಿ ಶೇಖ, ನಾಗರಾಜ ದುದಾನಿ ಆಗ್ರಹಿಸಿದ್ದಾರೆ.