ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುದ್ದಿ ಸಂಕ್ಷೇಪ

Mainashree
Updated On : 30 Aug 2013, 10:43 am

ಇಂದು ಅರ್ಥ ಮಂಥನ ಸ್ಪರ್ಧಾ ಸಮಾರಂಭ
ಧಾರವಾಡ: ಹು-ಧಾ ಮಹಾನಗರ ವಲಯದ ಅಂತರ್ ಕಾಲೇಜು ಮಟ್ಟದ ಅರ್ಥಮಂಥನ ಅರ್ಥಶಾಸ್ತ್ರ ಯುವ ಪ್ರತಿಭಾ ಪೋಷಣೆ ಸ್ಪರ್ಧಾ ಸಮಾರಂಭವನ್ನು ಇಲ್ಲಿನ ಮಹಾಂತ ಕಾಲೇಜು ಆ. 30ರಂದು  ಬೆಳಗ್ಗೆ 9ಕ್ಕೆ ಹಮ್ಮಿಕೊಂಡಿದೆ. ಚಿತ್ರದುರ್ಗದ ಆಡಳಿತಾಧಿಕಾರಿ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಉದ್ಘಾಟಿಸಲಿದ್ದು, ಪ್ರಾಚಾರ್ಯ ಡಾ. ಎನ್.ಆರ್. ಬಾಳಿಕಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಅವಳಿನಗರದ 20ಕ್ಕೂ ಹೆಚ್ಚು ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಅನ್ನಭಾಗ್ಯ ಯೋಜನೆ ಕುರಿತು ಚರ್ಚಾಸ್ಪರ್ಧೆ, ಅರ್ಥ ಜಿಜ್ಞಾಸೆ ಲಿಖಿತ ರಸಪ್ರಶ್ನೆ ಸ್ಪರ್ಧೆ ಹಾಗೂ ಅರ್ಥ ವಿಶ್ಲೇಷಣೆ ನಡೆಯಲಿದೆ ಎಂದು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಜಯಶ್ರೀ ಯಂಡಿಗೇರಿ ತಿಳಿಸಿದ್ದಾರೆ.

ನಾಳೆ ಕ್ಯಾಂಪಸ್ ಸಂದರ್ಶನ
ಧಾರವಾಡ: ಇಲ್ಲಿನ ಜೆಎಸ್ಸೆಸ್ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕಳೆದ ವರ್ಷ ಮೆಕ್ಯಾನಿಕಲ್ ಡಿಸೈಲ್ ಕೋರ್ಸ್‌ನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಮಾರುತಿ ಸುಜುಕಿ ಹಾಗೂ ಸಾಯಿ ಸರ್ವಿಸ್ ಲಿ. ಗೋವಾ ಆ. 31ರಂದು ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ. 0836-2462202 ಸಂಪರ್ಕಿಸಬಹುದು ಎಂದು ಮಹಾವೀರ ಉಪಾಧ್ಯೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 15ಕ್ಕೆ ಉದ್ಯೋಗ ಮೇಳ
ಧಾರವಾಡ: ಕಾಲೇಜು ಶಿಕ್ಷಣ ಇಲಾಖೆ ಹಾಗೂ ಜನತಾ ಶಿಕ್ಷಣ ಸಮಿತಿ ಜಂಟಿಯಾಗಿ ಸೆಪ್ಟೆಂಬರ್ 15ರಂದು ಜೆಎಸ್ಸೆಸ್ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಿದೆ. ಈಗಾಗಲೇ ಏಳು ಜಿಲ್ಲೆಗಳ 82 ಸರ್ಕಾರಿ ಪದವಿ ಕಾಲೇಜುಗಳ ಬಿಎ, ಬಿಕಾಂ, ಬಿಬಿಎ, ಬಿಎಸ್‌ಸಿ ಪದವಿ ವಿದ್ಯಾರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಲಿದ್ದಾರೆ. ಉತ್ತರ ಕರ್ನಾಟಕದ ಎಲ್ಲ ಉದ್ಯೋಗಪತಿಗಳು, ಕೈಗಾರಿಕೋದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ಮೇಳದ ಸಂಚಾಲಕರಾದ ಮಹಾವೀರ ಉಪಾದ್ಯೆ (ಮೊ. 94482 57489) ಸಂಪರ್ಕಿಸಬಹುದು ಅಥವಾ ಞಡಡ.ಠಟಛ್ಛಜಟಜಟಿಡಿಣ್ಠಜಜ್ಝಜಿಜಿಟಛ್ಝಟ.್ಛ್ಟಟ ಗೆ ಕಂಪನಿಯ ವಿವರವಾದ ಮಾಹಿತಿಯನ್ನು ನೀಡಬಹುದು.

ಬಹುಮಾನ ಧನಕ್ಕೆ ಅರ್ಜಿ
ಧಾರವಾಡ: ಮೆಟ್ರಿಕ್ ನಂತರದ ವಾರ್ಷಿಕ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಬಹುಮಾನ ಧನ ಮಂಜೂರಾತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಸಂಪರ್ಕಿಸಬಹುದು.

ಪ್ರಶಸ್ತಿ: ಅರ್ಜಿ ಆಹ್ವಾನ
ಧಾರವಾಡ: ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಅರ್ಜಿಗಳನ್ನು ಆ. 31ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕಚೇರಿಗಳನ್ನು ಸಂಪರ್ಕಿಸಬಹುದು.

ನರ್ಸಿಂಗ್ ಆನ್‌ಲೈನ್ ಅರ್ಜಿ
ಧಾರವಾಡ: ಜಿಲ್ಲೆಯ ಎಸ್ಸಿ-ಎಸ್ಟಿ ಪಂಗಡದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಡಿ (ಡಿಜಿಎನ್‌ಎಂ ಮತ್ತು ಬಿಎಸ್‌ಸಿ) ಕೋರ್ಸ್‌ಗಳಿಗೆ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ. 15 ಕೊನೆ ದಿನ. ಢಿಢಿಢಿ.ಡಢಿ.್ಞಛ್ಠ.ಟ್ಝ್ಛಿ.್ಝಟಿ  ವೆಬ್‌ಸೈಟ್‌ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಸಹಾಯ ಕೇಂದ್ರ ಅರ್ಜಿ ಆಹ್ವಾನ
ಧಾರವಾಡ: ಇಲ್ಲಿನ ಜಿಲ್ಲಾಧಿಕಾರಿ ಹಾಗೂ ಎಲ್ಲ ತಾಲೂಕು ಕಚೇರಿಗಳಲ್ಲಿ ಸಕಾಲ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಸಹಾಯ ಕೇಂದ್ರಗಳನ್ನು ನಿರ್ವಹಿಸಲು ನಿಗದಿತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಸೆ. 9 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿ ಕನಿಷ್ಠ ಪದವೀಧರರಾಗಿರಬೇಕು. ತಮ್ಮದೇ ಲ್ಯಾಪ್‌ಟಾಪ್, ಡಾಟಾಕಾರ್ಡ್, ಪ್ರಿಂಟರ್, ಯುಪಿಎಸ್, ಸ್ಕ್ಯಾನರ್‌ಗಳನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 9480324383 ಸಂಪರ್ಕಿಸಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement